` ಅಪ್ಪು ಆಭರಣ ತೊಟ್ಟ ಧಿರೇನ್ ಶಿವ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪು ಆಭರಣ ತೊಟ್ಟ ಧಿರೇನ್ ಶಿವ
ಅಪ್ಪು ಆಭರಣ ತೊಟ್ಟ ಧಿರೇನ್ ಶಿವ

ಡಾ.ರಾಜ್ ಕುಟುಂಬದ 3ನೇ ತಲೆಮಾರಿನ ಮತ್ತೊಂದು ಕುಡಿ ಧಿರೇನ್ ರಾಮ್ ಕುಮಾರ್. ಶಿವ 143 ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ. ರಾಮ್‍ಕುಮಾರ್ ಕುಟುಂಬದಿಂದ ಬರುತ್ತಿರೋ ಹೀರೋ ಧಿರೇನ್. ಈಗಾಗಲೇ ಮಗಳು ಧನ್ಯಾ ರಾಮ್‍ಕುಮಾರ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅತ್ತ ಶಿವ 143 ರಿಲೀಸ್ ಹತ್ತಿರವಾಗುತ್ತಿದ್ದಂತೆ ರಾಜ್ಯಾದ್ಯಂತ ಪ್ರವಾಸ ಹೊರಟಿದ್ದಾರೆ ಧಿರೇನ್.

ಕಲ್ಬುರ್ಗಿಯಲ್ಲಿ ಧಿರೇನ್ ಅವರಿಗೆ ಡಾ.ರಾಜ್ ಕುಟುಂಬದ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತಿಸಿದ್ದಾರೆ. ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಗಮನ ಸೆಳೆದದ್ದು ಧಿರೇನ್ ತೊಟ್ಟಿದ್ದ ಬಟ್ಟೆ. ಬಟ್ಟೆಯ ಮೇಲೆಲ್ಲ ಅಪ್ಪು ಚಿತ್ರಗಳ ಟೈಟಲ್ ಮತ್ತು ಫೋಟೋ. ಇದು ಅಭಿಮಾನಿಗಳನ್ನು ಇನ್ನಷ್ಟು ಭಾವುಕರನ್ನಾಗಿಸಿತು.

ಧಿರೇನ್ ಮತ್ತು ಮಾನ್ವಿತಾ ಕಾಮತ್ ಅಭಿನಯದ ಶಿವ 143 ಚಿತ್ರ ಇದೇ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ಅನಿಲ್ ಕುಮಾರ್ ನಿರ್ದೇಶನದ ಚಿತ್ರ ಪ್ರೀತಿ-ಕಾಮ-ದೋಖಾ-ರೌಡಿಸಂ-ಜಾತಿಯ ಹಿನ್ನೆಲೆಯ ಕಥೆ ಹೊಂದಿದೆ. ಜಯಣ್ಣ ಭೋಗೇಂದ್ರ ನಿರ್ಮಾಣದ ಚಿತ್ರವಿದು.