ಜಯಂತ ಕಾಯ್ಕಿಣಿ. ಅಪರೂಪದ ಕಥೆಗಳ ಸಾಹಿತಿ ಹಾಗೂ ಅಪರೂಪದ ಪ್ರೇಮಕವಿ. ಎಂದಿನಂತೆ ಗಾಳಿಪಟ 2 ಚಿತ್ರದ ಹಾಡುಗಳೂ ವಿಶಿಷ್ಟವಾಗಿ.. ಹೃದಯ ತಟ್ಟಿವೆ. ಪ್ರೇಮಿಗಳ ಎದೆಯ ಬಾಗಿಲು ಮುಟ್ಟಿವೆ. ಒಂದೆಡೆ ಚಿತ್ರವೂ ಸಕ್ಸಸ್. ಸೂಪರ್ ಸಕ್ಸಸ್ ಆಗಿದೆ. ಇದೇ ವೇಳೆ ಜಯಂತ ಕಾಯ್ಕಿಣಿಯವರಿಗೆ ಅವರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರು ಗಾಳಿಪಟ 2 ನೋಡಿ, ಫೋನ್ ಮಾಡಿ ಕಣ್ಣೀರಿಟ್ಟರಂತೆ.
ಕೆಲಸವಿಲ್ಲದೆ, ಕೊರೊನಾದಲ್ಲಿ ಇನ್ನಷ್ಟು ಜರ್ಝರಿತರಾಗಿದ್ದ ಮನಸ್ಸುಗಳನ್ನು ಈ ಚಿತ್ರ ತಟ್ಟಿದೆ ಎಂದು ಕಣ್ಣೀರಿಟ್ಟರಂತೆ. ಅಂದಹಾಗೆ ಕಾಯ್ಕಿಣಿಯವರ ಮೆಚ್ಚಿನ ಸಂಗೀತ ನಿರ್ದೇಶಕ ಯಾರು ಅಂದ್ಕೊಂಡ್ರಾ? ಪೂರ್ಣಚಂದ್ರ ತೇಜಸ್ವಿ.
ಲೂಸಿಯಾ, ಬಬ್ರೂ, ಯು ಟರ್ನ್‍ನಂತ ಚಿತ್ರಗಳಿಗೆ ಸಂಗೀತ ನೀಡಿರುವ ಪೂರ್ಣಚಂದ್ರ ಗಾಳಿಪಟ 2 ಚಿತ್ರವನ್ನು ನೋಡಿ ಖುಷಿ ಪಟ್ಟು ಕಣ್ಣಿರಿಟ್ಟು ಫೋನ್ ಮಾಡಿದ್ದರಂತೆ.
ಗಾಳಿಪಟ 2 ಹಾಗೆಯೇ ಇದೆ. ನಗುತ್ತಾ.. ನಗಿಸುತ್ತಾ.. ಅಳುತ್ತಾ.. ಅಳಿಸುತ್ತಾ.. ಸಾಗುವ ಕಥೆ ಪ್ರೇಕ್ಷಕರ ಹೃದಯ ಕಣ್ಣೀರಿಡುವಂತೆ ಮಾಡಿದೆ. ಆದರೆ.. ಯೋಗರಾಜ್ ಭಟ್-ಗಣೇಶ್ ಜೋಡಿಯ ಸಕ್ಸಸ್ ರಮೇಶ್ ರೆಡ್ಡಿಯವರಿಗೆ ಖುಷಿ ಕೊಟ್ಟಿದೆ. ಸಿನಿಮಾ ಗೆದ್ದಾಗ ಖುಷಿ ಪಡುವ ಮೊದಲ ವ್ಯಕ್ತಿ ನಿರ್ಮಾಪಕ ಅಲ್ವಾ?