ಶಶಾಂಕ್ ಚಿತ್ರಗಳೇ ಹಾಗೆ.. ಚೆಂದದ ಕಥೆಯ ಜೊತೆ ಜೊತೆಗೇ ಮೆಲೋಡಿ ಹಾಡುಗಳ ಮೆರವಣಿಗೆಯೂ ಇರುತ್ತದೆ. ಮೊಗ್ಗಿನ ಮನಸ್ಸು ಚಿತ್ರದಿಂದ ಆರಂಭವಾದ ಶಶಾಂಕ್ ಮತ್ತು ಮೆಲೋಡಿ ಹಾಡುಗಳ ಜುಗಲ್‍ಬಂಧಿ ಈಗಲೂ ಮುಂದುವರೆದಿದೆ. ಇದೇ ವಾರ ಬಿಡುಗಡೆಯಾಗುತ್ತಿರೋ ಲವ್ 360 ಚಿತ್ರದ ಹಾಡುಗಳೆಲ್ಲವೂ ಮೆಲೋಡಿ.. ಮೆಲೋಡಿ.. ಮೆಲೋಡಿ.. ಕೇಳುತ್ತಾ ಕೇಳುತ್ತಾ ಗುನುಗುನುಗುಟ್ಟಬೇಕು.. ಮೆಲೋಡಿಗಳ ಶಕ್ತಿಯೇ ಅದು.
ಸಿದ್ಧ್ ಶ್ರೀರಾಮ್ ಹಾಡಿರುವ ಜಗವೇ ನೀನು.. ಗೆಳತಿಯೇ ಹಾಡು ಗುಂಗು ಹಿಡಿಸಿದ್ದರೆ, ಸಂಜಿತ್ ಹೆಗ್ಡೆ ಹಾಡಿರುವ ಸಖಿಯೇ ಸಾವರಿಸು.. ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿದೆ. ಭೋರ್ಗರೆದು ಕಡಲು.. ಹಾಡಿನ ಮ್ಯಾಜಿಕ್ಕೇ ಬೇರೆ.. ಇದರ ಮಧ್ಯೆ ಯೋಗರಾಜ್ ಭಟ್ಟ ಜಜಾಂಗ್ ಜಾಂಗ್ ಹಾಡು ಮಾತ್ರ ಸ್ವಲ್ಪ ಡಿಫರೆಂಟು. ಆದರೆ.. ಲವ್ ಪಾರ್ಟಿಗೆ ಹೇಳಿ ಮಾಡಿಸಿರೋ ಹಾಡು. ಪ್ರೀತಿ ಸಕ್ಸಸ್ ಆದವರಿಗೂ.. ಫೇಲ್ಯೂರ್ ಆದವರಿಗೂ ಏಕಕಾಲಕ್ಕೆ ರೀಚ್ ಆಗಬಲ್ಲ ಗೀತೆ..
ಇದು ಶಶಾಂಕ್ ಮತ್ತು ಅರ್ಜುನ್ ಜನ್ಯ ಅವರ ಹ್ಯಾಟ್ರಿಕ್ ಮೋಡಿ. ಜರಾಸಂಧ ಮತ್ತು ಮುಂಗಾರುಮಳೆ 2 ನಂತರ ಇಬ್ಬರೂ ಮತ್ತೊಮ್ಮೆ ಜೊತೆಯಾಗಿದ್ದಾರೆ. ಚಿತ್ರದ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ಜಗವೇ ನೀನು.. ಆ ಹಾಡನ್ನು ಹೇಗೆ ಚಿತ್ರೀಕರಿಸಬಹುದು ಎಂಬ ಕುತೂಹಲ ಹಲವರಲ್ಲಿದೆ. ನಿಮಗೆ ನಿರಾಶೆ ಮಾಡುವುದಿಲ್ಲ. ಇಡೀ ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ಒಂದೊಂದು ಥೀಮ್ ಮ್ಯೂಸಿಕ್ ಇದೆ. ಈ ಚಿತ್ರದ ಹಾಡು ಮತ್ತು ಸಂಗೀತದ ಮೂಲಕ ಅರ್ಜುನ್ ಜನ್ಯ ಹೊಸ ಸ್ಟಾಂಡರ್ಡ್ ಸೃಷ್ಟಿಸಲಿದ್ದಾರೆ. ಇಡೀ ಚಿತ್ರ ಒಂದು ಭಾವನೆಗಳ ಪಯಣ ಎನ್ನುವುದು ಶಶಾಂಕ್ ಕೊಡುವ ಭರವಸೆ.
ಶಶಾಂಕ್ ಕೊಟ್ಟಿರುವ ಯಾವ ಭರವಸೆಗಳೂ ಇದುವರೆಗೆ ಹುಸಿಯಾಗಿಲ್ಲ. ಅದರಲ್ಲೂ ಲವ್ ಸ್ಟೋರಿಗಳದ್ದು. ಈ ಬಾರಿ ಪ್ರವೀಣ್ ಮತ್ತು ರಚನಾ ಇಂದರ್‍ರಂತಹ ಮುದ್ದು ಮುದ್ದಾದ ಜೋಡಿಯೊಂದು ಸಿಕ್ಕಿದೆ. ಚಿತ್ರಕ್ಕೆ ಶಶಾಂಕ್ ಅವರಷ್ಟೇ ಅಲ್ಲ, ಡಾ.ಮಂಜುಳಾ ಮೂರ್ತಿ ಕೂಡಾ ನಿರ್ಮಾಪಕರು