ಸೆಪ್ಟೆಂಬರ್ 28ಕ್ಕೆ ಸಲಾರ್ ಬಿಡುಗಡೆ ಎಂದು ಥ್ರಿಲ್ ಆಗಬೇಡಿ. ಅದು ರಿಲೀಸ್ ಆಗುವುದು 2022ರ ಸೆಪ್ಟೆಂಬರ್ 28ಕ್ಕಲ್ಲ. 2023ರ ಸೆ.28ಕ್ಕೆ. ಅಂದ್ರೆ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್`ನ ಸಲಾರ್ ನೋಡೋಕೆ ಪ್ರೇಕ್ಷಕರು ಇನ್ನೂ ಒಂದು ವರ್ಷ.. ಒಂದಿಡೀ ವರ್ಷ ಕಾಯಬೇಕು.
ಇತ್ತ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಾಗಲೇ ಪ್ರಭಾಸ್ ನಟನೆಯ ಸಲಾರ್ ಸೆಟ್ಟೇರಿತ್ತು. ಆದರೆ.. ಈಗ ಒಂದಿಡೀ ವರ್ಷ ಮುಂದಕ್ಕೆ ಹೋಗಿದೆ. ಚಿತ್ರದ ಹೀರೋ ಪ್ರಭಾಸ್, ನಾಯಕಿ ಶೃತಿ ಹಾಸನ್, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್.. ಮೊದಲಾದ ಕೆಲವರನ್ನು ಬಿಟ್ಟರೆ ಚಿತ್ರ ತಂಡವೆಲ್ಲ ಕನ್ನಡಿಗರದ್ದೇ. ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡಿಗ. ಪ್ರಶಾಂತ್ ನೀಲ್, ಕ್ಯಾಮೆರಾ ಡೈರೆಕ್ಟರ್ ಭುವನ್ ಗೌಡ, ಸಂಗೀತ ನಿರ್ದೇಸಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್... ಎಲ್ಲರೂ ಕನ್ನಡಿಗರೇ.
ಚಿತ್ರದ ಮೇಲೆ ನಿರೀಕ್ಷೆಯೂ ಹೆಚ್ಚಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಭರ್ಜರಿಯಾಗಿ ಗೆದ್ದಿರುವ ಪ್ರಶಾಂತ್ ನೀಲ್`ಗೆ ಅದೇ ಸಕ್ಸಸ್ ಮುಂದುವರೆಸುವ ಜವಾಬ್ದಾರಿಯಿದ್ದರೆ, ಸಾಹೋ, ರಾಧೇಶ್ಯಾಮ್ ಚಿತ್ರಗಳ ಅನಿರೀಕ್ಷಿತ ಆಘಾತ ಪ್ರಭಾಸ್ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ.