` ರಿಷಬ್ ಶೆಟ್ಟಿ..ಸಪ್ತಮಿ ಗೌಡ ಸಿಂಗರ ಸಿರಿಯೇ.. ಶೃಂಗಾರ ಗೀತೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಿಷಬ್ ಶೆಟ್ಟಿ..ಸಪ್ತಮಿ ಗೌಡ ಸಿಂಗರ ಸಿರಿಯೇ.. ಶೃಂಗಾರ ಗೀತೆ..
Singara Siriye From Kantara Movie

ಅವಳ ಮುಖದಲ್ಲಿ ಮುಗ್ದತೆ.. ಹುಸಿ ಕೋಪ.. ಪ್ರೀತಿ.. ನಿರೀಕ್ಷೆ.. ಕಾತುರ.. ಅವನ ಮುಖದಲ್ಲಿ ಪ್ರೀತಿ.. ಆತುರ.. ನಗು.. ತುಂಟತನ.. ಗತ್ತು..

ಅವರಿಬ್ಬರ ಮಧ್ಯೆ ಹುಟ್ಟಿಕೊಳ್ಳೋ ಪ್ರೀತಿಯ ಮಧ್ಯೆ ಕರಾವಳಿಯ ಸೊಗಡು.. ಮೀನು.. ಮಾರುಕಟ್ಟೆ.. ದೋಣಿ.. ಜೊತೆ ಜೊತೆಯಲ್ಲೇ ಸಾಗುವ ಪುಟ್ಟದೊಂದು ಕಥೆ..

ಕಾಂತಾರ ಚಿತ್ರತಂಡ ಸ್ವಾತಂತ್ರ್ಯ ದಿನದಂದು ಹೊರಗೆ ಬಿಟ್ಟ ಸಿಂಗಾರ ಸಿರಿಯೇ ಎಂಬ ಶೃಂಗಾರ ಗೀತೆಯಲ್ಲಿ ಇಷ್ಟೆಲ್ಲ ಇದೆ.

ಅವಳು ಸಪ್ತಮಿ ಗೌಡ.. ಹಾಡಿನ ಆರಂಭದಲ್ಲಿ ಅರ್ಜಿ ಕೊಟ್ಟವಳು.. ಹಾಡಿನ ಕೊನೆಯಲ್ಲಿ ಫಾರೆಸ್ಟ್ ಆಫೀಸರ್ ಆಗುತ್ತಾಳೆ. ಆಕೆಗೆ ಆ ಕೆಲಸ ಸಿಗಲು ಓಡಾಡುವ ರಿಷಬ್ ಶೆಟ್ಟಿ.. ಓಡಾಡುತ್ತಲೇ ಆಕೆಯ ಹೃದಯ ಗೆಲ್ಲುತ್ತಾನೆ.

ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನಲ್ಲಿ ಮತ್ತೊಮ್ಮೆ ಮಾಂತ್ರಿಕಲೋಕ ಸೃಷ್ಟಿಸಿದ್ದರೆ.. ಆ ಹಾಡಿಗೆ ವಿಜಯ್ ಪ್ರಕಾಶ್ ಮತ್ತು ಅನನ್ಯಾ ಭಟ್ ಹೃದಯದಿಂದಲೇ ಧ್ವನಿ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಡಿನ ಪದಪದಗಳನ್ನೂ ತಾಜಾ ಮೀನು ಪೋಣಿಸುವಂತೆ ಪೋಣಿಸಿದ್ದಾರೆ. ಕುಂದಾಪ್ರದ ಜನಪದದ ಸಿರಿ ಹಾಡಿನ ಮಧ್ಯೆ ಇಣುಕುತ್ತದೆ..