ರಾಜಕುಮಾರ ಚಿತ್ರದಿಂದ ಕನ್ನಡಿಗರ ಹೃದಯಕ್ಕೇ ಲಗ್ಗೆಯಿಟ್ಟಿದ್ದ ಪ್ರಿಯಾ ಆನಂದ್ ಯೋಗರಾಜ್ ಭಟ್ಟರ ಚಿತ್ರಕ್ಕೆ ಸೇರಿಕೊಂಡಿದ್ದಾರೆ. ಗಾಳಿಪಟ 2ನಲ್ಲಿಯೂ ಮಿಂಚು ಹರಿಸಿದ್ದ ನಿಶ್ವಿಕಾ ನಾಯ್ಡು ಮತ್ತೊಮ್ಮೆ ಭಟ್ಟರ ಕ್ಯಾಂಪ್ ಸೇರಿದ್ದಾರೆ. ಶಿವಣ್ಣ ಮತ್ತು ಪ್ರಭುದೇವ ಅವರೊಂದಿಗೆ ಭಟ್ಟರು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.
ಸದ್ಯಕ್ಕೆ ಗಾಳಿಪಟ 2 ಸಕ್ಸಸ್ ಸಂಭ್ರಮದಲ್ಲಿರುವ ಯೋಗರಾಜ್ ಭಟ್, ಶಿವಣ್ಣ-ಪ್ರಭುದೇವ ಜೋಡಿಯ ಚಿತ್ರದ ಚಿತ್ರೀಕರಣಕ್ಕೆ ಚಿಕ್ಕ ಬ್ರೇಕ್ ಕೊಟ್ಟಿದ್ದಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನವರ ಈ ಚಿತ್ರಕ್ಕೆ ಸದ್ಯಕ್ಕೆ ಕುಲದಲ್ಲಿ ಕೀಳ್ಯಾವುದೋ ಅನ್ನೋ ಟೈಟಲ್ ಇಡಲಾಗಿದೆ.
ಪ್ರಿಯಾ ಆನಂದ್ ರಾಜಕುಮಾರ ಹಾಗೂ ಜೇಮ್ಸ್ ಚಿತ್ರದಲ್ಲಿ ಪುನೀತ್ ಎದುರು ನಾಯಕಿಯಾಗಿ ನಟಿಸಿದ್ದವರು. ಗಣೇಶ್ ಜೊತೆಯಲ್ಲೂ ನಟಿಸಿದ್ದ ಪ್ರಿಯಾಗೆ ಶಿವಣ್ಣನ ಜೊತೆ ಇದು ಮೊದಲ ಸಿನಿಮಾ.
ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಪ್ರಭುದೇವಗೆ ನಾಯಕಿ. ಭಟ್ಟರ ಜೊತೆ ಅವರದ್ದು 2ನೇ ಸಿನಿಮಾ. ಹಾಗೆ ನೋಡಿದರೆ ಶಿವಣ್ಣಗೂ ಕೂಡಾ ಭಟ್ಟರ ಜೊತೆ ಇದು ಮೊದಲ ಸಿನಿಮಾ.