` ವಂದೇ ಮಾತರಂ.. ಜಗ್ಗೇಶ್ ಅವರಿಗೆ ಸ್ಫೂರ್ತಿಯಾಗಿದ್ದು ಮಿಲೇ ಸುರ್ ಮೇರಾ ತುಮ್ಹಾರಾ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ವಂದೇ ಮಾತರಂ.. ಜಗ್ಗೇಶ್ ಅವರಿಗೆ ಸ್ಫೂರ್ತಿಯಾಗಿದ್ದು ಮಿಲೇ ಸುರ್ ಮೇರಾ ತುಮ್ಹಾರಾ..
Vande Mataram Song

ಎಸ್.ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ, ವೆಂಕಟೇಶ್ ಪ್ರಸಾದ್, ಜೋಗತಿ ಮಂಜಮ್ಮ ಅವರಂತಹ ಸಾಧಕರು.. ಕಿಚ್ಚ ಸುದೀಪ್, ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಧೃವ ಸರ್ಜಾ, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ರಿಷಬ್ ಶೆಟ್ಟಿ, ಧನಂಜಯ, ಅನಂತನಾಗ್.. ಹೀಗೆ ಚಿತ್ರರಂಗದ ಕಲಾವಿದರು.. ಒಟ್ಟಿಗೇ ಸೇರಿ ಹಾಡಿರುವ ಹಾಡು.. ವಂದೇಮಾತರಂ.

ದೇಶದ ರಾಷ್ಟ್ರೀಯ ಗೀತೆಗೆ ಹೊಸದಾಗಿ ಸಂಗೀತ ಸಂಯೋಜಸಿದವರು ಪ್ರವೀಣ್ ಡಿ.ರಾವ್. ಹಾಡಿಗೆ ಅದ್ಭುತ ಧ್ವನಿ ನೀಡಿದವರು ವಿಜಯ್ ಪ್ರಕಾಶ್. ಈ ಹಾಡನ್ನು ನಿರ್ದೇಶನ ಮಾಡಿದ್ದು ಸಂತೋಷ್ ಆನಂದರಾಮ್ ಅವರಾದರೆ, ನಿರ್ಮಾಣ ಜಗ್ಗೇಶ್ ಅವರದ್ದು.

ಇಂತಾದ್ದೊಂದು ಹಾಡು ಮಾಡೋಣ ಎಂದು ಗೆಳೆಯ ಶ್ರೀನಿಧಿ ಹೇಳಿದರು. ಎಲ್ಲರನ್ನೂ ಫೋನ್ ಮೂಲಕವೇ ಸಂಪರ್ಕಿಸಿದೆ. ಮಿಲ್ ಸುರ್ ಮೇರಾ ತುಮ್ಹಾರಾ ಹಾಡು ನನಗೆ ಚಿಕ್ಕಂದಿನಿಂದಲೂ ಇಷ್ಟ. ಇಂತಹ ಹಾಡನ್ನು ಕನ್ನಡದಲ್ಲಿ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ ಎಂದಿದ್ದಾರೆ ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್.