` ಭಟ್ರ ಹಾಡು ಹಿಟ್ಟಾಗ್ ಹೋಯ್ತು.. ಜಜಾಂಗ್ ಜಾಂಗ್.. : ಲವ್ ಪಾರ್ಟಿಗೊಂದು ಸಾಂಗು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಟ್ರ ಹಾಡು ಹಿಟ್ಟಾಗ್ ಹೋಯ್ತು.. ಜಜಾಂಗ್ ಜಾಂಗ್.. : ಲವ್ ಪಾರ್ಟಿಗೊಂದು ಸಾಂಗು..
Love 360 Movie Image

ಶಶಾಂಕ್ : ಒಂದು ಪ್ರಮೋಷನಲ್ ಸಾಂಗ್ ಮಾಡೋಣ..

ಅರ್ಜುನ್ ಜನ್ಯ : ಯಾವ್ ತರ ಸಾಂಗ್ ಸರ್.. ಏನಾದ್ರೂ ಬರೆದಿದ್ದೀರ..

ಶಶಾಂಕ್ : ಇಂತಹ ಸಾಂಗುಗಳಿಗೆ ವಲ್ರ್ಡ್ ಫೇಮಸ್ ಆಗಿರೋ ಯೋಗರಾಜ್ ಭಟ್ರು ಬರೆದುಕೊಟ್ಟವ್ರೆ..

ಅರ್ಜುನ್ ಜನ್ಯ : ಜಜಾಂಗ್ ಜಾಂಗ್.. ಏನ್ಸಾರ್ ಇದು.. ಹಿಂಗದ್ರೇನು..?

ಶಶಾಂಕ್ : ಯಾವನಿಗ್ಗೊತ್ರಿ.. ಭಟ್ರು ಬರೆದುಕೊಡವೆಲ್ಲ ಇಂಥವೇ.. ಸಾಂಗ್ ಹಿಟ್ ಆಯ್ತದೆ.. ಹಾಕಿ..

ಲವ್ 360 ಚಿತ್ರದ ಹಾಡು ಜಜಾಂಗ್ ಜಾಂಗ್ ಶುರುವಾಗೋ ಮುಂಚಿನ ಸಂಗೀತ ನಿರ್ದೇಶಕರು ಮತ್ತು ನಿರ್ದೇಶಕರ ನಡುವಿನ ಸಂಭಾಷಣೆ ಇದು. ನಂತರ ಶುರುವಾಗೋದು ಹಾಡು.. ಜಜಾಂಗ್ ಜಾಂಗ್..ಜಜಾಂಗ್ ಜಾಂಗ್..

ಹಾಡಿನಲ್ಲಿ ಹಾಡಿ ಕುಣಿದಿರೋದು ರವಿಶಂಕರ್ ಗೌಡ. ಇದು ಲವ್ ಸಕ್ಸಸ್ ಆಗಿದ್ದಕ್ಕೆ ಪಾರ್ಟಿ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಹಾಡನ್ನು ಅರ್ಜುನ್ ಜನ್ಯ ಅವರೇ ಹಾಡಿದ್ದಾರೆ..ಜಜಾಂಗ್ ಜಾಂಗ್..

ಪ್ರವೀಣ್ ಮತ್ತು ರಚನಾ ಇಂದರ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ. ಜಜಾಂಗ್ ಜಾಂಗ್.. ಜಗವೇ ನೀನು ಗೆಳತಿಯೇ.. ಹಾಗೂ ಭೋರ್ಗರೆದು ಕಡಲು.. ಹಾಡುಗಳ ಮೂಲಕ ಮೆಲೋಡಿ ಮ್ಯಾಜಿಕ್ ಮಾಡಿದ್ದ ಶಶಾಂಕ್-ಅರ್ಜುನ್ ಜೋಡಿ.. ಇಲ್ಲಿ ಟಪ್ಪಾಂಗುಚ್ಚಿ ಮ್ಯಾಜಿಕ್ ಮಾಡಿದೆ.ಜಜಾಂಗ್ ಜಾಂಗ್..