` ಶಿವ 143 ಚಿತ್ರದ ಕಥೆ ಏನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶಿವ 143 ಚಿತ್ರದ ಕಥೆ ಏನು?
Shiva 143 Movie Image

ಅವನೊಬ್ಬ ರೌಡಿ. ಅವಳು ಶ್ರೀಮಂತನ ಮಗಳು. ಅವಳಿಗೆ ಅವನ ಮೇಲೆ ಪ್ರೀತಿ ಹುಟ್ಟುತ್ತೆ. ಅವರಿಬ್ಬರೂ ಒಂದಾಗುತ್ತಾರೆ. ಲವ್ ಮಾಡ್ತಾರೆ. ರೊಮ್ಯಾನ್ಸ್ ಮಾಡ್ತಾರೆ. ಖುಲ್ಲಂ ಖುಲ್ಲ.. ಬೀಡುಬೀಸಾಗಿ ಒಂದಾಗಿ ಬಿಡ್ತಾರೆ. ಅವನಿಗಿಂತ ಅವಳೇ ಬೋಲ್ಡ್. ಆದರೆ.. ಕ್ಲೈಮಾಕ್ಸ್ ಹೊತ್ತಿಗೆ ಅವಳ ವರ್ತನೆ..ವ್ಯಕ್ತಿತ್ವವೇ ಬದಲಾಗಿ ಹೋಗುತ್ತೆ. ಅವಳಿಗೆ ಬೇಕಿದ್ದುದು ಅವನಾ.. ಅವನ ದೇಹವಾ.. ಅವನ ಪ್ರೀತಿಯಾ.. ಅದು ಆಕರ್ಷಣೆಯಾ.. ಅವಳು ಮಾಡೋದು ಮೋಸವಾ.. ಮುಂದೆ..

ಶಿವ 143 ಚಿತ್ರದ ಈ ಕಥೆ ತೆಲುಗಿನ ಆರ್‍ಎಕ್ಸ್ 100 ಚಿತ್ರದ ರೀಮೇಕ್. ವೊರಿಜಿನಲ್ ಸಿನಿಮಾ ಹೀರೋ ಧಿರೇನ್‍ಗೆ ಇಷ್ಟವಾಗಿತ್ತಂತೆ. ಮನೆಯವರೂ ಓಕೆ ಎಂದರು. ಜಯಣ್ಣ-ಭೋಗೇಂದ್ರ ಹಾಗೂ ಡಾ.ಸೂರಿ ನಿರ್ಮಾಪಕರಾದರು. ಅನಿಲ್ ನಿರ್ದೇಶಕರಾದರು. ಧಿರೇನ್-ಮಾನ್ವಿತಾ ಜೋಡಿಯಾದರು. ಶಿವ 143 ಈಗ ರಿಲೀಸ್ ಆಗುವುದಕ್ಕೆ ರೆಡಿ.

ಸದ್ಯಕ್ಕೆ ಶಿವ 143 ಚಿತ್ರತಂಡ ಒಂದು ಟೀಸರ್ ಮತ್ತೊಂದು ಹಾಡು ತೋರಿಸಿದೆ. ಹಾಡಿನಲ್ಲಂತೂ ಮುತ್ತಿನ ಮತ್ತಿನ ಮಳೆಯಲ್ಲಿ ಧಿರೇನ್-ಮಾನ್ವಿತಾ ತೋಯ್ದು ಹೋಗಿದ್ದಾರೆ. ರೊಮ್ಯಾನ್ಸ್‍ನ್ನೂ ಹೀಗೂ ತೋರಿಸಬಹುದು ಎಂಬಂತೆ ಕಟ್ಟಿಕೊಟ್ಟಿದ್ದಾರೆ ಅನಿಲ್ ಕುಮಾರ್. ಕಥೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಎಂದಿರುವ ಅನಿಲ್ ಚಿತ್ರ ಪ್ರೇಕ್ಷಕರಿಗೆ  ಥ್ರಿಲ್ ಕೊಡಲಿದೆ ಎಂದಿದ್ದಾರೆ.