ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಎಂದ ಕೂಡಲೇ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬಿಡುಗಡೆಯಾದ ಹಾಡುಗಳು, ಟ್ರೇಲರ್ ಹೊಸ ಲೆವೆಲ್ಲಿನಲ್ಲಿದ್ದವು. ಆ ನಿರೀಕ್ಷೆಗೆ ತಕ್ಕಂತೆಯೇ ಭಟ್ ಮತ್ತು ಗಣಿ ಜೋಡಿ ಗೆಲುವಿನ ನಗು ಬೀರಿದೆ. ಮೊದಲ ದಿನದ ಕಲೆಕ್ಷನ್ 20 ಕೋಟಿಯ ಗಡಿ ದಾಟಿದೆ.
ಗಾಳಿಪಟ 2 ಮಲ್ಟಿಪ್ಲೆಕ್ಸ್‍ಗಳಲ್ಲಿ 250ಕ್ಕೂ ಹೆಚ್ಚು ಶೋ ಕಂಡರೆ, 150 ಸಿಂಗಲ್ ಸ್ಕ್ರೀನ್‍ಗಳಲ್ಲಿ 600+ ಶೋ ಪ್ರದರ್ಶನಗೊಂಡಿದೆ. ಎಲ್ಲ ಶೋಗಳೂ ಹೌಸ್‍ಫುಲ್ ಅನ್ನೋದು ರಮೇಶ್ ರೆಡ್ಡಿಯವರ ಖುಷಿಗೆ ಕಾರಣ. ಹೊರರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಶೋಗಳಿದ್ದವರು. ವಿದೇಶಗಳಲ್ಲಿ 50+ ಶೋಗಳಿದ್ದವು. ಎಲ್ಲೆಡೆ ಚಿತ್ರಮಂದಿರ ತುಂಬಿದೆ ಸಂದೇಶಗಳು ಬಂದಿವೆ. ಒಂದು ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ ಹೆಚ್ಚೂ ಕಡಿಮೆ 20 ಕೋಟಿ ಎನ್ನಲಾಗಿದೆ. ಗಾಳಿಪಟದ ಜೊತೆ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ.. ಆ ಎರಡೂ ಚಿತ್ರಗಳ ದೊಡ್ಡ ಮಾರುಕಟ್ಟೆಯನ್ನೂ ಮೀರಿ ಗಾಳಿಪಟ ಕಲೆಕ್ಷನ್ ಮಾಡಿದೆ.
ಇದು ಇಡೀ ಗಾಳಿಪಟ 2 ತಂಡದ ಗೆಲುವು. ನನ್ನ ಮತ್ತು ಭಟ್ಟರ ಕಾಂಬಿನೇಷನ್ ಗೆಲ್ಲಬೇಕು ಎನ್ನುವ ಕನಸನ್ನು ಪ್ರೇಕ್ಷಕರು ಎತ್ತಿ ಹಿಡಿದಿದ್ದಾರೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಗಣೇಶ್.