ಅನಂತನಾಗ್ ಮತ್ತೊಮ್ಮೆ ಹೀರೋ ಆಗಿದ್ದಾರೆ. ಅದು ಗಾಳಿಪಟದಲ್ಲಿ. ಅರೆ ಚಿತ್ರದ ಹೀರೋ ಗಣೇಶ್ ಅಲ್ಲವಾ ಎನ್ನಬೇಡಿ. ಗಣೇಶ್ ಹೀರೋ. ಡೌಟಿಲ್ಲ. ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್.. ಹೀಗೆ ಎಲ್ಲರೂ ಇದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ.. ಎಲ್ಲವೂ ಇದ್ದು ಚಿತ್ರದಲ್ಲಿ ಪ್ರೇಕ್ಷಕರಿಗೆ ಅನಂತನಾಗ್ ಅವರ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಉಘೇ ಎಂದಿದ್ದಾರೆ.
ಕನ್ನಡ ಮೇಷ್ಟ್ರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಅನಂತನಾಗ್, ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಂತೂ ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿಸಿದ್ದಾರೆ.
ಭಟ್ಟರ ಚಿತ್ರಗಳಲ್ಲಿ ಅನಂತ್ ನಾಗ್ ಹೆಚ್ಚೂ ಕಡಿಮೆ ಖಾಯಮ್ಮಾಗಿರುತ್ತಾರೆ. ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ವಾಸ್ತುಪ್ರಕಾರ.. ಹೀಗೆ ಬಹುತೇಕ ಎಲ್ಲ ಚಿತ್ರಗಳಲ್ಲೂ ಇದ್ದ ಅನಂತನಾಗ್ ಗಾಳಿಪಟ 2 ದಲ್ಲಿ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ಭಾವುಕರನ್ನಾಗಿಸಿದ್ದಾರೆ. ಅನಂತ್ ಅವರಿಗೇ ಮಾತು ಮೌನದಲ್ಲಿ ಪೈಪೋಟಿ ನೀಡಿರುವುದು ಗಣೇಶ್.
ಗೋಧಿಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಅನಂತನಾಗ್ ನೆನಪಾಗುತ್ತಾರೆ.