30 ವರ್ಷಗಳ ಹಿಂದೆ ಬೆಳ್ಳಿಕಾಲುಂಗುರ ಶುರುವಾಗಿತ್ತು. ತನು ಚಿತ್ರದ 2ನೇ ಸಿನಿಮಾ ಬೆಳ್ಳಿಕಾಲುಂಗುರ. 1992ರಲ್ಲಿ ಮಾಲಾಶ್ರೀ ಅಭಿನಯದ 20ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿದ್ದವು. 1992ರಲ್ಲಿ ರಿಲೀಸ್ ಆದ ಮೊದಲ ಸಿನಿಮಾ ಬೆಳ್ಳಿಕಾಲುಂಗುರ. ಸಾ.ರಾ.ಗೋವಿಂದು ನಿರ್ಮಾಪಕ. ಅದೇ ತನು ಚಿತ್ರ ಈಗ 30 ವರ್ಷಗಳ ನಂತರ ಬೆಳ್ಳಿಕಾಲುಂಗುರ ಚಿತ್ರಕ್ಕೆ ಮುಹೂರ್ತ ಮಾಡಿದೆ.
ಸಾ.ರಾ.ಗೋವಿಂದು ನಿರ್ಮಾಣದ ಚಿತ್ರಕ್ಕೆ ಹೆಚ್.ವಾಸು ನಿರ್ದೇಶಕ. 1992ರ ಬೆಳ್ಳಿಕಾಲುಂಗುರದಲ್ಲಿ ಅಸಿಸ್ಟೆಂಡ್ ಡೈರೆಕ್ಟರ್ ಆಗಿದ್ದವರು. ಈಗಿನ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಥೆ ಹೇಳುತ್ತಿದ್ದೇವೆ. ಇಂದಿನ ಟ್ರೆಂಡ್‍ಗೆ ತಕ್ಕಂತೆ ಕಥೆ ಮಾಡಿದ್ದೇನೆ ಎಂದಿದ್ದಾರೆ ಹೆಚ್.ವಾಸು.
ಮುಹೂರ್ತದಲ್ಲಿ ಸಿದ್ದರಾಮಯ್ಯ, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಎಸ್.ಎ.ಗೋವಿಂದರಾಜು ಸೇರಿದಂತೆ ದೊಡ್ಮನೆಯ ಬಹುತೇಕರು ಹಾಜರಿದ್ದರು. ನಾಯಕಿಯಾಗಿರುವುದು ರಾಮ್‍ಕುಮಾರ್ ಪುತ್ರಿ ಧನ್ಯಾ. ದೊಡ್ಮನೆ ಹುಡುಗಿಯೇ. ಚಿತ್ರ ಸೆಟ್ಟೇರಿದೆ. ಧನ್ಯಾ ರಾಮಕುಮಾರ್ ಎದುರು ಸಮರ್ಥ್ ನಾಯಕರಾಗಿ ನಟಿಸುತ್ತಿದ್ದಾರೆ.