ಶೋಕ್ದಾರ್ ಧನ್ವೀರ್ ನಾಯಕರಾಗಿರೋ ಹೊಸ ಚಿತ್ರ ವಾಮನ. ಈ ವಾಮನನಿಗೀಗ ಜೋಡಿಯಾಗಿ ರೀಷ್ಮಾ ನಾಣಯ್ಯ ಬಂದಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ಮುಗ್ಧ ಪ್ರೇಮಿಯಾಗಿ, ಅತ್ಯಾಚಾರಕ್ಕೊಳಗಾಗಿ ನರಳುವ ಅನಿತಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ರೀಷ್ಮಾ ಇಲ್ಲಿ ನಗೆಯ ಸುಂದರಿ. ಸದಾ ನಗುತ್ತಲೆ ಇರುವ ಪಾತ್ರವಂತೆ ಅವರದ್ದು.
ನಾಯಕನ ಪಯಣದಲ್ಲಿ ಜೊತೆಯಾಗಿರುವ, ಬೆಂಬಲವಾಗಿರುವ ಪಾತ್ರದಲ್ಲಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಏಕ್ ಲವ್ ಯಾ ನಂತರ ರೀಷ್ಮಾ ಬಾನದಾರಿಯಲ್ಲಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲೇ ಶಂಕರ್ ರಾಮನ್ ನಿರ್ದೇಶನದ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ. ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ಮಾಪಕರು.