` ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 
Gaalipata 2 Movie Image

ಗಾಳಿಪಟ 2 ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ. ಎಲ್ಲೆಡೆ ಚಿತ್ರಮಂದಿರಗಳು ಹೌಸ್‍ಫುಲ್ ಆಗಿವೆ. ಕೆಲವು ಥಿಯೇಟರುಗಳಲ್ಲಂತೂ ಪ್ರೇಕ್ಷಕರು ಗೊಂದಲದಿಂದಾಗಿ ಗಲಾಟೆಯೂ ಆಗಿವೆ. ಮೊದಲ ದಿನವೇ ಭರ್ಜರಿ ಯಶಸ್ಸಿನ ಸುಳಿವು ಕೊಟ್ಟಿದ್ದಾರೆ ಭಟ್-ಗಣಿ ಜೋಡಿ. ಗಾಳಿಪಟ 2 ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡಿರುವ 4ನೇ ಸಿನಿಮಾ. ಈ ಹಿಂದಿನ ಎಲ್ಲ ಚಿತ್ರಗಳೂ ಸಕ್ಸಸ್ ಆಗಿರುವ ಹಿನ್ನೆಲೆಯಲ್ಲಿ ಗಾಳಿಪಟ 2 ಮೇಲೆ ಭರ್ಜರಿ ನಿರೀಕ್ಷೆಯೂ ಇತ್ತು.

ಏಕೆಂದರೆ ಗಾಳಿಪಟ ಹೆಸರಿಗೇ ಅಂತದ್ದೊಂದು ಚರಿತ್ರೆ ಇದೆ. ಭಟ್-ಗಣೇಶ್ ಜೋಡಿಯ ಗಾಳಿಪಟ ಚಿತ್ರದ ಟೈಟಲ್ ಇಟ್ಟುಕೊಂಡ ಮೇಲೆ ಚಿತ್ರ ಯಾವುದೇ ಕಾರಣಕ್ಕೂ ಕಡಿಮೆ ಎನ್ನಿಸಬಾರದು ಅನ್ನೋದು ನನ್ನ ಆಸೆಯಾಗಿತ್ತು. ಅದರಂತೆಯೇ ಚಿತ್ರ ಚೆನ್ನಾಗಿ ಬಂದಿದೆ ಎಂದು ಖುಷಿ ಹಂಚಿಕೊಂಡಿರೋದು ರಮೇಶ್ ರೆಡ್ಡಿ. ಗಾಳಿಪಟ ಟೈಟಲ್`ಗೆ ಒಂದು ಘನತೆ ಇದೆ. ಅದಕ್ಕೆ ಅಪವಾದವಾಗದಂತೆ ಸಿನಿಮಾ ಮಾಡಿದ್ದೇವೆ ಎಂದಿರೋ ರಮೇಶ್ ರೆಡ್ಡಿ ಚಿತ್ರಕ್ಕೆ ದೇಶವಿದೇಸಗಳಲ್ಲಿ 800+ ಮತ್ತು ಕರ್ನಾಟಕವೊಂದರಲ್ಲೇ 225ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡಿದ್ದಾರೆ. ಗಾಳಿಪಟ ಅನ್ನೋದು ನನ್ನ ಪಾಲಿಗೆ ಸಿನಿಮಾ ಅಲ್ಲ. ಅದೊಂದು ಎಮೋಷನ್ ಎಂದಿದ್ದಾರೆ ಗಣೇಶ್.