ಕೇಳಿಸದೆ ಕಲ್ಲು ಕಲ್ಲಿನಲಿ..
ಒಂದೇ ಒಂದು ಕಣ್ಣಬಿಂದು ಜಾರಿದರೆ ನನ್ನಾಣೆ..
ಬೆಳ್ಳಿಕಾಲುಂಗುರ ಶ್ರೀಮತಿಗೆ ಸುಂದರ..
ಬೆಳ್ಳಿಕಾಲುಂಗುರ ಎಂದ ತಕ್ಷಣ ನೆನಪಾಗುವುದೇ ಚೆಂದದ ಹಾಡುಗಳು.. ಹಂಪಿಯ ಆ ದೃಶ್ಯ ವೈಭವವನ್ನು ಕನ್ನಡದ ಇನ್ನೊಂದು ಚಿತ್ರದಲ್ಲಿ ನೊಡಲು ಸಾಧ್ಯವಿಲ್ಲ. ಮಾಲಾಶ್ರೀ, ತಾರಾ ವೇಣು, ಸುನಿಲ್, ಗುರುದತ್, ಶಿವಕುಮಾರ್, ಅವಿನಾಶ್.. ಹೀಗೆ ಹಲವು ಕಲಾವಿದರ ನಟನೆ, ಕೆ.ವಿ.ರಾಜು ಅವರ ನಿರ್ದೇಶನ.. ಆ ಸಿನಿಮಾ ಬಂದಿದ್ದು 1922ರಲ್ಲಿ. ಈಗ ಬರೋಬ್ಬರಿ 30 ವರ್ಷಗಳ ನಂತರ.. 2022ರಲ್ಲಿ ಮತ್ತೊಮ್ಮೆ ಬೆಳ್ಳಿಕಾಲುಂಗುರ ಸೆಟ್ಟೇರುತ್ತಿದೆ.
1992ರಲ್ಲಿ ಬೆಳ್ಳಿಕಾಲುಂಗುರ ಚಿತ್ರ ನಿರ್ಮಿಸಿದ್ದ ಸಾ.ರಾ.ಗೋವಿಂದು ಅವರೇ ಈ ಚಿತ್ರಕ್ಕೂ ನಿರ್ಮಾಪಕ. ನಿರ್ದೇಶನದ ಹೊಣೆಯನ್ನು ಹೆಚ್.ವಾಸು ಹೆಗಲಿಗೆ ಹೊರಿಸಿರುವ ಗೋವಿಂದು, ಗುರುಕಿರಣ್ ಅವರಿಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದಾರೆ. ಕಥೆ ವಾಸು ಅವರದ್ದಾದರೆ, ಚಿತ್ರಕಥೆ-ನಿರ್ದೇಶನ ಎಂ.ಎಸ್.ರಮೇಶ್ ಅವರದದು.ನ
ಈಗ ಮಾಲಾಶ್ರೀ ಜಾಗಕ್ಕೆ ಅರ್ಥಾತ್ ನಾಯಕಿ ಸ್ಥಾನಕ್ಕೆ ಬಂದಿರೋದು ಧನ್ಯಾ ರಾಮ್`ಕುಮಾರ್. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಇಬ್ಬರು ಹೀರೋಗಳಿರುತ್ತಾರೆ ಎಂದಿದ್ದಾರೆ ಹೆಚ್.ವಾಸು.
ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಶಿವಣ್ಣ, ರಾಘವೇಂದ್ರ ರಾಜಕುಮಾರ್, ವಾಟಾಳ್ ನಾಗರಾಜ್, ರಾಕ್‍ಲೈನ್ ವೆಂಕಟೇಶ್, ಎಸ್.ಎ.ಗೋವಿಂದರಾಜ್, ಉಮಾದೇವಿ ಕೆ.ವಿ.ರಾಜು, ಗಿರಿಜಾ ಲೋಕೇಶ್, ತಾರಾವೇಣು, ದೊಡ್ಡಣ್ಣ, ಅವಿನಾಶ್, ಶಿವಕುಮಾರ್, ಕನ್ನಡಪ್ರಭ ಮತ್ತು ಸುವರ್ಣ ನ್ಯುಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ, ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಬಿ.ರಾಮಮೂರ್ತಿ, ಲಹರಿ ವೇಲು, ದ.ಭಾರತ ಫಿಲಂ ಚೇಂಬರ್ ಕಾರ್ಯದರ್ಶಿ ರವಿ ಕೊಟ್ಟಾರಕರ, ಪ್ರದರ್ಶಕರಾದ ಎಸ್.ಟಿ.ಆನಂದ್ ಭಾಗವಹಿಸುತ್ತಿದ್ದಾರೆ.