ಕೆಟ್ಟ ಫ್ಯಾಮಿಲಿನಲ್ಲಿ ಒಳ್ಳೆಯವನು ಹುಟ್ಟುಬಹುದು. ಆದರೆ ಒಳ್ಳೆ ಫ್ಯಾಮಿಲಿಯಲ್ಲಿ ಇಂತಹವನು ಹುಟ್ಟಬಾರದು..
ಹುಚ್ಚ.. ಹುಚ್ಚು ಪ್ರೇಮಿ ಅವನು..
ಅವನ ಲವ್ ಸ್ಟೋರಿ ಕೇಳ್ತಿದ್ರೆ ದುಷ್ಮನ್ ಆದ ನಾನೇ ದಂಗಾಗಿಬಿಟ್ಟೆ. ಎಷ್ಟು ಕುಡಿದ್ರೂ ನಷೆ ಏರ್ತಿಲ್ಲ..
ಇಷ್ಟು ಡೈಲಾಗುಗಳ ಮಧ್ಯೆ ಓಪನ್ ಆಗಿದ್ದಾನೆ ಶಿವ. ಶಿವ 143.
ಇದು ರಾಮ್`ಕುಮಾರ್ ಪುತ್ರ ಧಿರೇನ್ ರಾಮಕುಮಾರ್ ಮೊದಲ ಸಿನಿಮಾ. ಜಯಣ್ಣ ಬ್ಯಾನರ್‍ನಲ್ಲಿ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ ಧಿರೇನ್. ಈಗಾಗಲೇ ಚಿತ್ರದ ಮಳೆ ಹನಿಯೇ.. ಹಾಡು ಬಿಡುಗಡೆಯಾಗಿತ್ತು. ನೋಡಿದವರೆಲ್ಲ ಬೆಚ್ಚಗಾಗುವಂತೆ ಮುತ್ತಿನ ಮಳೆ ಸುರಸಿದ್ದರು ಧಿರೇನ್ ಮತ್ತು ಮಾನ್ವಿತಾ ಕಾಮತ್. ಈಗ ದಂಗಾಗುವಂತೆ ಎಂಟ್ರಿ ಕೊಟ್ಟಿದ್ದಾರೆ.
ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ಶಿವ 143. ಮಾಸ್ ಹೀರೋ ಆಗುವ ಎಲ್ಲ ಸೂಚನೆಗಳನ್ನೂ ಧಿರೇನ್ ಕೊಟ್ಟಿದ್ದಾರೆ. ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.