ರಮ್ಯ ಮತ್ತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿ ಫ್ಯಾನ್ಸ್‍ಗೆ ಕೊಟ್ಟಿರೋ ಥ್ರಿಲ್ಲೇ ಬೇರೆ. ಹೀಗಾಗಿಯೇ.. ಗಾಂಧಿನಗರದಲ್ಲಿ ದಿನಕ್ಕೊಂದು ಸುದ್ದಿ ಹಬ್ಬುತ್ತಲೇ ಇದೆ. ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿ ಮೊದಲು ಬಂತು. ನಂತರ ಡಾಲಿ ಧನಂಜಯ್ ಸಿನಿಮಾನಂತೆ ಅನ್ನೋದು ಸುದ್ದಿಯಾಯ್ತು. ಅದಾದ ಮೇಲೆ ಹೊಂಬಾಳೆಯವರ ಜೊತೆ ರಮ್ಯಾ ಕಮ್ ಬ್ಯಾಕ್ ಪಕ್ಕಾ ಎಂದರು. ದ್ವಿತ್ವ ಚಿತ್ರಕ್ಕೆ ರಮ್ಯಾ ಯೆಸ್ ಎಂದಿದ್ದರೂ ಕೂಡಾ. ಈಗಲೂ ಕೂಡಾ ರಮ್ಯಾ, ಯುವ ರಾಜಕುಮಾರ್ ಪ್ರಥಮ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೊ ಸುದ್ದಿ ಇದೆ. ಇದೆಲ್ಲದರ ಮಧ್ಯೆ ಉದ್ಭವವಾದ ಮತ್ತೊಂದು ಸುದ್ದಿ, ರಾಜೇಶ್ ಬಿ.ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋದು.
ರಮ್ಯಾ ಕಥೆ ಕೇಳಿದ್ದಾರಂತೆ. ಇಷ್ಟವಾಗಿದೆಯಂತೆ. ನಟಿಸೋದಷ್ಟೇ ಅಲ್ಲ, ಅವರೇ ಪ್ರೊಡ್ಯೂಸ್ ಕೂಡಾ ಮಾಡ್ತಾರಂತೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿ ಸುತ್ತಿ ಮೀಡಿಯಾ ಮನೆಗಳಿಗೆ ಕಾಲಿಟ್ಟಿತ್ತು. ಈಗ ರಾಜೇಶ್ ಬಿ.ಶೆಟ್ಟಿಯವರಿಂದಲೇ ಉತ್ತರ ಸಿಕ್ಕಿದೆ.
ಇಲ್ಲ. ರಮ್ಯಾ ಅವರಿಗ ನಾನು ಕಥೆ ಹೇಳಿಲ್ಲ. ಅವರು ಕೇಳಿಲ್ಲ. ಎಲ್ಲವೂ ಗಾಸಿಪ್ ಎಂದಿದ್ದಾರೆ ರಾಜೇಶ್ ಬಿ.ಶೆಟ್ಟಿ.