` ರಕ್ಷಿತ್ ಶೆಟ್ಟಿ ಬ್ಯಾನರ್`ನಿಂದ ಇನ್ನೊಂದು ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಕ್ಷಿತ್ ಶೆಟ್ಟಿ ಬ್ಯಾನರ್`ನಿಂದ ಇನ್ನೊಂದು ಸಿನಿಮಾ
Mithya Movie Image

ರಕ್ಷಿತ್ ಶೆಟ್ಟಿ ಬ್ಯುಸಿ. ನಟನೆ, ನಿರ್ದೇಶನ ಮತ್ತು ನಿರ್ಮಾಣ ಮೂರರಲ್ಲೂ ತೊಡಗಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಒಂದಲ್ಲ ಒಂದು ಕೆಲಸಲ್ಲಿ ಬ್ಯುಸಿಯಿದ್ದೇ ಇರ್ತಾರೆ. ಈಗಾಗಲೇ ಸಪ್ತಸಾಗರದಾಚೆಯೆಲ್ಲೋ ಸಿನಿಮಾದಲ್ಲಿ ನಟರಾಗಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ರಿಚರ್ಡ್ ಆಂಟನಿಗೆ ನಟ ಮತ್ತು ನಿರ್ದೇಶಕನಾಗಿ ರೆಡಿಯಾಗುತ್ತಿದ್ದಾರೆ. ಇದರ ಮಧ್ಯೆ ಪರಂವಾ ಸ್ಟುಡಿಯೋಸ್‍ನಿಂದ ಏಕಂ ಹಾಗೂ ಅಬ್ರಕದಬ್ರ ಚಿತ್ರಗಳ ಕೆಲಸ ನಡೆಯುತ್ತಿದೆ.

ಇದರ ಜೊತೆ ಮಿಥ್ಯ ಅನ್ನೋ ಇನ್ನೊಂದು ಸಿನಿಮಾ ಘೋಷಣೆಯಾಗಿದೆ. ಇದು ಈ ತಿಂಗಳಲ್ಲಿ ಪರಂವಾ ಸ್ಟುಡಿಯೋಸ್‍ನಿಂದ ಘೋಷಣೆಯಾಗುತ್ತಿರೋ 3ನೇ ಸಿನಿಮಾ. ಅಭಿಜಿತ್ ಮಹೇಶ್ ನಿರ್ದೇಶನದಲ್ಲಿ ಒಂದು ಹಾಗೂ ಚಂದ್ರಕಾಂತ್ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಈ ತಿಂಗಳಲ್ಲಿ ಈಗಾಗಲೇ ಘೋಷಣೆಯಾಗಿವೆ.

ಮಿಥ್ಯ ಚಿತ್ರ 11 ವರ್ಷದ ಬಾಲಕನ ಕಥೆಯಂತೆ. ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಹುಡುಗ ಹೊಸ ಪ್ರಪಂಚ ಹುಡುಕಿಕೊಂಡು ಹೊರಡುವ ಕಥೆ ಮಿಥ್ಯ ಚಿತ್ರದ್ದು. ಏಕಂ ವೆಬ್ ಸರಣಿ ನಿರ್ದೇಶಿಸಿದ್ದ ಸುಮಂತ್ ಭಟ್ ಈ ಚಿತ್ರಕ್ಕೆ ಡೈರೆಕ್ಟರ್. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ.