ಗಾಳಿಪಟದಲ್ಲೂ ಅಷ್ಟೆ, ಗಣಿ ಪಾತ್ರಕ್ಕೆ ಕನ್ನಡ ಬರ್ತಾ ಇರಲ್ಲ. ಆದರೆ, ಟೀಚರ್ ಡೈಸಿ ಬೋಪಣ್ಣ ಮೇಲೆ ಪ್ರೀತಿ ಹುಟ್ಟುತ್ತೆ. ನನಗೆ ಕನ್ನಡ ಬರದೇ ಇರೋದಕ್ಕೆ ಕಾರಣ ನಾನಲ್ಲ, ನನ್ನ ಅಪ್ಪ ಎನ್ನುವ ನಾಯಕ ಕಷ್ಟಪಟ್ಟು ಕನ್ನಡ ಕಲಿತು ನಾಯಕಿಯ ಹೃದಯ ಗೆಲ್ತಾನೆ. ಇಲ್ಲಿಯೂ ಗಣಿ ಸ್ಟೂಡೆಂಟು.
ಅಂದಹಾಗೆ ಗಣಿಯ ಎದುರು ಜೋಡಿಯಾಗಿರೋದು ವೈಭವಿ ಶಾಂಡಿಲ್ಯ. ಚಿತ್ರದಲ್ಲಿ ವೈಭವಿಯವರದ್ದು ಕನ್ನಡವನ್ನು ಪ್ರೀತಿಸುವ ವಿದ್ಯಾರ್ಥಿನಿಯ ಪಾತ್ರ. ಶ್ವೇತಾ ಅನ್ನೋದು ವೈಭವಿಯ ಹೆಸರು. ಭಾಷೆಯನ್ನು ಪ್ರೀತಿಸುವ, ಆರಾಧಿಸುವ ವ್ಯಕ್ತಿತ್ವ ಶ್ವೇತಾಳದ್ದು. ಸಿನಿಮಾದಲ್ಲಿ ಕನ್ನಡವನ್ನು ಪ್ರೀತಿಸುವ ಹುಡುಗಿಯ ಪಾತ್ರ ಮಾಡಿರುವ ವೈಭವಿಗೆ ರಿಯಲ್ ಲೈಫಲ್ಲಿ ಕನ್ನಡ ಬರಲ್ಲ. ಏಕೆಂದರೆ ಮೂಲ ಮುಂಬೈ.
ನನಗೆ ಕನ್ನಡ ಬರಲ್ಲ. ಆದರೆ ನಾನು ಮಾಡುವ ಚಿತ್ರ ಮತ್ತು ಪಾತ್ರದ ಕುರಿತು ತಿಳಿದುಕೊಳ್ಳೋದು ನನ್ನ ಆದ್ಯತೆಯಾಗಿತ್ತು. ಅದಕ್ಕಾಗಿಯೇ ಗಾಳಿಪಟ ಚಿತ್ರವನ್ನು ನೋಡಿದೆ. ಒಂದ್ಸಲ ಸಬ್ ಟೈಟಲ್ ಜೊತೆ ನೋಡಿ, ಇನ್ನೊಂದ್ಸಲ ಸಬ್ ಟೈಟಲ್ ಇಲ್ಲದೆ ನೋಡಿದೆ. ಚಿತ್ರ ಇಷ್ಟವಾಯಿತು. ಯೋಗರಾಜ್ ಭಟ್ ಅವರ ವರ್ಕಿಂಗ್ ಸ್ಟೈಲ್ ಕೂಡಾ ಗೊತ್ತಾಯ್ತು ಎಂದಿದ್ದಾರೆ ವೈಭವಿ.
ಯೋಗರಾಜ್ ಭಟ್ ಅವರ ಬಳಿ ಸೀನ್ ಮತ್ತು ಡೈಲಾಗ್ ಮೊದಲೇ ತೆಗೆದುಕೊಂಡು ಸಂಪೂರ್ಣ ಸಿದ್ಧವಾಗಿಯೇ ಸೆಟ್‍ಗೆ ಹೋಗುತ್ತಿದೆ. ಅವರು ಬರೆಯುವ ಒಂದೊಂದು ಸಾಲೂ ಮುತ್ತು ಪೋಣಿಸಿದಂತೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ನನ್ನ ಬೆಸ್ಟ್ ಕೊಟ್ಟಿದ್ದೇನೆ ಎನ್ನುತ್ತಾರೆ ವೈಭವಿ.
ಗಣೇಶ್ ಜೊತೆ ನಟಿಸಿದ್ದು ಒಂಥರಾ ಸುಂದರ ಅನುಭವ. ಈ ಚಿತ್ರ ನನಗೆ ಖಂಡಿತಾ ಬ್ರೇಕ್ ಕೊಡಲಿದೆ ಎನ್ನುವುದು ವೈಭವಿ ಅವರ ವಿಶ್ವಾಸ.