` ಸುಸಂಸ್ಕøತ ಹುಡುಗಿ ಯಾವತ್ತೂ ಸೆಕ್ಸ್ ಬೇಕು ಅಂತ ಕೇಳಲ್ಲ : ಶಕ್ತಿಮಾನ್ ವಿವಾದಾತ್ಮಕ ಹೇಳಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸುಸಂಸ್ಕøತ ಹುಡುಗಿ ಯಾವತ್ತೂ ಸೆಕ್ಸ್ ಬೇಕು ಅಂತ ಕೇಳಲ್ಲ : ಶಕ್ತಿಮಾನ್ ವಿವಾದಾತ್ಮಕ ಹೇಳಿಕೆ
Mukhesh Khanna

ಮಹಾಭಾರತದ ಭೀಷ್ಮ, ಶಕ್ತಿಮಾನ್ ಧಾರಾವಾಹಿ ಮೂಲಕ ಖ್ಯಾತರಾಗಿರುವ ಮುಖೇಶ್ ಕನ್ನಾ ಸುಮ್ಮನೆ ಇರುವವರಲ್ಲ. ಅದರಲ್ಲೂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡ್ತಾನೇ ಇರ್ತಾರೆ. ಈ ಬಾರಿಯೂ ಅಂತದ್ದೇ ವಿವಾದ ಮಾಡಿಕೊಂಡಿದ್ದಾರೆ.

ಈ ಹಿಂದೆ ಮಹಿಳೆಯರು ಮನೆಯಿಂದ ಹೊರಬಂದು ಉದ್ಯೋಗಕ್ಕೆ ಹೋಗುವುದರಿಂದಲೇ ಮೀಟೂ ವಿವಾದ ಹುಟ್ಟುತ್ತಿವೆ. ಮೀಟೂ ಆಗಬಾರದು ಎಂದರೆ ಹುಡುಗಿಯರು ಮನೆಯಿಂದ ಹೊರಗೆ ಬರಬಾರದು, ಕೆಲಸಕ್ಕೆ ಹೋಗಬಾರದು ಎಂದು ಹೇಳಿಕೆ ಕೊಟ್ಟಿದ್ದರು. ವಿವಾದವಾದ ಮೇಲೆ ನಾನು ಹೇಳಿದ್ದು ಹಾಗಲ್ಲ, ಮೀಟೂ ಹೇಗಾಗುತ್ತೆ ಎಂದು ವಿವರಿಸಿದ್ದೆ ಅಷ್ಟೇ ಎಂದಿದ್ದರು.

ಈಗ..

ಕ್ಯಾ ಅಪ್ಕೋ ಭೀ ಐಸಿ ಲಡ್ಕಿಯಾ ಲುಭಾತಿ ಹೈ ಶೀರ್ಷಿಕೆಯ ವಿಡಿಯೋದಲ್ಲಿ ಯಾವುದೇ ಹುಡುಗಿ ನಾನು ನಿಮ್ಮೊಂದಿಗೆ ಸೆಕ್ಸ್ ಮಾಡಲು ಬಯಸುತ್ತೇನೆ ಎಂದರೆ ಖಂಡಿತಾ ಆಕೆ ಸುಸಂಸ್ಕøತ ಮನೆತನಕ್ಕೆ ಸೇರಿದ ಹುಡುಗಿ ಅಲ್ಲ. ಒಳ್ಳೆಯ ಮನೆತನದ ಹುಡುಗಿ ಯಾವತ್ತೂ ಆ ರೀತಿ ಮಾತನಾಡಲ್ಲ ಎಂದಿದ್ದಾರೆ.

ಮುಖೇಶ್ ಕನ್ನಾ ಹೆಣ್ಣು ಮಕ್ಕಳ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕೆಲವರು.. ಸೆಕ್ಸ್ ಬಯಸೋದ್ರಲ್ಲಿ ಏನು ತಪ್ಪು ಎಂದು ಮತ್ತೂ ಕೆಲವರು ಮುಕೇಶ್ ವಿರುದ್ಧ ಕಿಡಿ ಕಾರಿದ್ದಾರೆ. ಮುಕೇಶ್ ಹೇಳಿರೋದ್ರಲ್ಲಿ ತಪ್ಪೇನಿದೆ ಎನ್ನುವವರಿಗೂ ಕೊರತೆ ಇಲ್ಲ.