ಚಿತ್ರರಂಗದ ಗಣ್ಯರು ಮೆಚ್ಚಿದರು. ಪ್ರಾಣಿಪ್ರಿಯರು ಮೆಚ್ಚಿದರು. ಪ್ರೇಕ್ಷಕರು ಮೆಚ್ಚಿದರು. ವಿಮರ್ಶಕರು ಮೆಚ್ಚಿದರು. ಬಾಕ್ಸಾಫೀಸ್ ಮೆಚ್ಚಿತು. 777 ಚಾರ್ಲಿ ಗೆದ್ದಿತು. ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿದ್ದ ಚಿತ್ರ ಸೂಪರ್ ಡ್ಯೂಪರ್ ಹಿಟ್. ಕಿರಣ್ ರಾಜ್ ತಮ್ಮ ಮೊದಲ ನಿರ್ದೇಶನದಲ್ಲೇ ಅದ್ಭುತ ಪ್ರತಿಭೆ ಮೆರೆದರು. ಈಗ 777 ಚಾರ್ಲಿ ಚಿತ್ರಕ್ಕೆ ಇನ್ನೊಂದು ಕಿರೀಟ ಬಂದಿದೆ.
ಲೆಟರ್ ಬಾಕ್ಸ್ ಅನ್ನೋ ಅಂತಾರಾಷ್ಟ್ರೀಯ ಸಿನಿಮಾಗಳ ಪಟ್ಟಿಯಲ್ಲಿ 777 ಚಾರ್ಲಿ ಚಿತ್ರಕ್ಕೆ 48ನೇ ಸ್ಥಾನ. ಈ ಲಿಸ್ಟ್‍ನಲ್ಲಿರೋ ಕನ್ನಡದ ಏಕೈಕ ಸಿನಿಮಾ ಚಾರ್ಲಿ. ಚಾರ್ಲಿ ಬಿಟ್ಟರೆ ಈ ಪಟ್ಟಿಯಲ್ಲಿರೋ ಇತರೆ ಇಂಡಿಯನ್ ಸಿನಿಮಾಗಳೆಂದರೆ ರಾಜಮೌಳಿಯವರ ಆರ್.ಆರ್.ಆರ್ ಮತ್ತು ಕಮಲ್‍ಹಾಸನ್`ರ ವಿಕ್ರಂ