ಈಶ್ವರಿ ಸಂಸ್ಥೆ 50 ವರ್ಷ ಪೂರೈಸಿ, ರವಿಚಂದ್ರನ್ 60 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಬರುತ್ತಿರೋ ಸಿನಿಮಾ ರವಿ ಬೋಪಣ್ಣ. ಇದು ಮಲಯಾಳಂನ ಜೋಸೆಫ್ ಚಿತ್ರದ ರೀಮೇಕ್. ಕರ್ಮ ಈಸ್ ಕ್ರೇಜಿ ಅನ್ನೋ ಟ್ಯಾಗ್‍ಲೈನ್‍ನಲ್ಲಿ ಬರುತ್ತಿರೋ ಚಿತ್ರ ವೊರಿಜಿನಲ್ ಕಥಾ ಹಂದರವನ್ನೇ ಇಟ್ಟುಕೊಂಡಿದೆ. ಉಳಿದದ್ದೆಲ್ಲ ಕ್ರೇಜಿ ಸೃಷ್ಟಿ. ಅದು ಚಿತ್ರಕ್ಕಾಗಿ ರಿಲೀಸ್ ಮಾಡಿರುವ 7 ನಿಮಿಷದ ಟ್ರೇಲರಿನಲ್ಲಿ ಗೊತ್ತಾಗುತ್ತಿದೆ.
ಟ್ರೇಲರಿನಲ್ಲಿ ಕಥೆಯ ಸುಳಿವು ಕೊಡದೆ, ಕೇವಲ ಕುತೂಹಲ ಹುಟ್ಟಿಸಿದ್ದಾರೆ ರವಿ. ಮಧ್ಯೆ ಮಧ್ಯೆ ಗಹಗಹಿಸಿ ನಗುವ ಬೋಪಣ್ಣ.. ಲೇ..ಲೇ..ಲೇ.. ಬೋಪಣ್ಣ.. ಎಂಬ ಡೈಲಾಗ್. ಕ್ಲೀನ್ ಶೇವ್ ಲುಕ್ ಒಂದು.. ಹುರಿಮೀಸೆಯ ಲುಕ್ ಇನ್ನೊಂದು.. ಗಡ್ಡಧಾರಿಯ ಲುಕ್ ಇನ್ನೊಂದು.. ಕಾವ್ಯಾ ಶೆಟ್ಟಿ ಹಾಟ್ ಆಗಿದ್ದರೆ, ರಾಧಿಕಾ ಕುಮಾರಸ್ವಾಮಿ ಬೋಲ್ಡ್ ಆಗಿದ್ದಾರೆ. ರಚಿತಾರಾಮ್ ಕಾಣಿಸಿಲ್ಲ. ಕಿಚ್ಚ ಸುದೀಪ್ ಲಾಸ್ಟ್ ಎಂಟ್ರಿ ಸೀನ್ ಇದೆ. ಮಿಕ್ಕಂತೆ ಇದು ಕ್ರೇಜಿಮ್ಯಾನ್ ಒನ್ ಮ್ಯಾನ್ ಶೋ.. ಇಡೀ ಟ್ರೇಲರಿನಲ್ಲಿ ರವಿಚಂದ್ರನ್ ತಮ್ಮ ಕ್ರೇಜಿ ಶಾಟ್‍ಗಳನ್ನು ತೆಗೆಯೋಕೆ ಪಟ್ಟಿರುವ ಶ್ರಮ, ಕುಸುರಿ ಎದ್ದು ಕಾಣುತ್ತೆ.