ಶಶಾಂಕ್ ಮೊದಲಿನಿಂದಲೂ ವಿಭಿನ್ನ ಶೈಲಿಯ ಕಥೆ ಮತ್ತು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವರು. ಅವರ ಚಿತ್ರಗಳಲ್ಲಿ ಅಂತಾದ್ದೊಂದು ವಿಶೇಷವಿದ್ದೇ ಇರುತ್ತೆ. ಲವ್ 360 ಟ್ರೇಲರ್ ಕೂಡಾ ಹಾಗೆಯೇ ಇದೆ. ಏನೋ ವಿಶೇಷವಿದೆ. ನಮ್ಮನ್ನೆಲ್ಲ ಹಳೆಯ ನೆನಪುಗಳಿಗೆ ಕರೆದುಕೊಂಡು ಹೋಗುತ್ತೆ..
ಇದು ನಿರ್ದೇಶಕ ದುನಿಯಾ ಸೂರಿ ಲವ್ 360 ಚಿತ್ರದ ಟ್ರೇಲರ್ ಬಗ್ಗೆ ಹೇಳಿರೋ ಮಾತು. ಅಫ್‍ಕೋರ್ಸ್.. ದುನಿಯಾ ಸೂರಿ ಯೋಗರಾಜ್ ಭಟ್ಟರ ಗಾಳಿಪಟ ಚಿತ್ರವನ್ನೂ ಹೊಗಳಿದ್ದಾರೆ. ಆದರೆ.. ಭಟ್ಟರು ಮತ್ತು ಸೂರಿಯವರ ಸ್ನೇಹ, ಗುರು-ಶಿಷ್ಯರಂತಹಾ ಬಾಂಧವ್ಯ ನೋಡಿದವರಿಗೆ ಅದು ವಿಶೇಷ ಎನ್ನಿಸೋದಿಲ್ಲ. ಕನ್ನಡದಲ್ಲಿ ಇತ್ತೀಚೆಗೆ ಇಂತಾದ್ದೊಂದು ಅಭಿಮಾನದ ಟ್ರೆಂಡ್ ಶುರುವಾಗಿದೆ. ಒಬ್ಬರ ಚಿತ್ರವನ್ನು ಮತ್ತೊಬ್ಬರು ಹೊಗಳುವ.. ಮೆಚ್ಚುವ ಟ್ರೆಂಡ್. ಹಿಂದಿತ್ತು. ಮಧ್ಯೆ ಸ್ಟಾಪ್ ಆಗಿತ್ತು. ಈಗ ಮತ್ತೆ ಶುರುವಾಗಿದೆ.
ಸೂರಿಯಂತಹ ತಂತ್ರಜ್ಞ ಹೊಗಳಿದಾಗ ಶಶಾಂಕ್ ಖುಷಿಯಾಗಲೇಬೇಕಲ್ವಾ? ಇದು ನನಗೆ ಸಿಕ್ಕ ಅತಿ ದೊಡ್ಡ ಕೊಡುಗೆ ಎಂದಿದ್ದಾರೆ ಶಶಾಂಕ್. ಈಗಾಗಲೇ ಜಗವೇ ನೀನು ಗೆಳತಿಯೇ ಹಾಡು.. ಯುವ ಪ್ರೇಮಿಗಳ ಹೃದಯಗೀತೆಯಾಗಿದೆ. ರಚನಾ ಇಂದರ್ & ಪ್ರವೀಣ್ ಅವರ ಲವ್ ಸ್ಟೋರಿ ಹೃದಯ ತಟ್ಟುತ್ತಿದೆ. ಆಗಸ್ಟ್ 19ಕ್ಕೆ ಸಿನಿಮಾ ರಿಲೀಸ್.