ಅಪ್ಪು.. ಹಿರಿಯರ ಪಾಲಿಗೆ ಮಗನಾಗಿ.. ಕಿರಿಯರ ಪಾಲಿಗೆ ಅಣ್ಣನಾಗಿ.. ಯುವಜನತೆಯ ಪಾಲಿಗೆ ಸ್ಫೂರ್ತಿಯಾಗಿದ್ದ ನಟ. ಬಡವರ ಪಾಲಿಗೆ ದೇವರಾಗಿದ್ದ ವಿಷಯ ಗೊತ್ತಾಗಿದ್ದು ಅಪ್ಪು ದೂರವಾದ ಬಳಿಕ. ಪುನೀತ್ ಅವರಲ್ಲಿ ಅಣ್ಣ-ತಮ್ಮಂದಿರನ್ನು ಅದೆಷ್ಟು ಜೀವಗಳು ಕಂಡಿವೆಯೋ.. ಗೊತ್ತಿಲ್ಲ. ಅಪ್ಪು ಈಗ ರಕ್ಷಾ ಬಂಧನವಾಗಿದ್ದಾರೆ.
ಇದೇ ಆಗಸ್ಟ್ 11-12ಕ್ಕೆ ರಾಖಿ ಹಬ್ಬವಿದೆ. ತಂಗಿಯರು ಅಣ್ಣನಿಗೆ.. ಅಕ್ಕಂದಿರು ತಮ್ಮನಿಗೆ ರಾಖಿ ಕಟ್ಟಿ ರಕ್ಷಾಬಂಧನ ಮಾಡುತ್ತಾರೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಅಪ್ಪು ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿರೋದು ಈ ಬಾರಿಯ ರಕ್ಷಾಬಂಧನದ ವಿಶೇಷ. ಹಾಗೆ ನೋಡಿದರೆ.. ರಕ್ಷಾಬಂಧನ ಕನ್ನಡಿಗರಿಗೆ ಹೊರಗಿನಿಂದ ಬಂದ ಹಬ್ಬ. ಉತ್ತರ ಭಾರತೀಯರಿಂದ ಬಂದು ಇಲ್ಲಿಯೂ ಜನಪ್ರಿಯವಾಗಿರುವ ಹಬ್ಬ. ನಮ್ಮಲ್ಲಿ ನಾಗರಪಂಚಮಿಯಂದೇ ಅಣ್ಣ-ತಂಗಿ, ಅಕ್ಕ-ತಮ್ಮ ಹಬ್ಬ ನಡೆಯುತ್ತೆ. ಆ ದಿನ ಕಂಕಣ ಕಟ್ಟುತ್ತಾರೆ. ಆದರೆ.. ಸೋದರ ಸೋದರಿಯರ ಹಬ್ಬಕ್ಕೆ.. ಭಾಷೆ..ಪ್ರದೇಶಗಳ ಗಡಿಯಾದರೂ ಏಕೆ ಅಲ್ಲವೇ.. ಈ ಬಾರಿಯ ಹಬ್ಬಕ್ಕೆ ಅಪ್ಪು ಕೂಡಾ ಇರುತ್ತಾರೆ.