` ಹುಲಿಗೆಮ್ಮನಾಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹುಲಿಗೆಮ್ಮನಾಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ
Huligemma Devi

ಹುಲಿಗೆಮ್ಮ. ಉತ್ತರ ಕರ್ನಾಟಕದಲ್ಲಿ ಈ ತಾಯಿಯ ಭಕ್ತರ ಸಂಖ್ಯೆಯೂ ಹೆಚ್ಚು. ಪ್ರೀತಿಯೂ ಹೆಚ್ಚು. ಈಗ ಆ ಹುಲಿಗೆಮ್ಮ ದೇವಿಯ ಪಾತ್ರ ಮಾಡುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ. ಪ್ರಿಯಾಂಕಾ ಮೂಲತಃ ಬಂಗಾಲಿ. ಬೆಂಗಾಲಿಯವರ ದುರ್ಗಾದೇವಿಯ ಭಕ್ತಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಾನು ಮೊದಲಿನಿಂದಲೂ ದೇವಿಯ ಭಕ್ತೆ. ಈ ಚಿತ್ರದ ಮೂಲಕ ಭಕ್ತಿಪ್ರಧಾನ ಚಿತ್ರದಲ್ಲಿ ನಟಿಸುವ ಆಸೆ ಕೈಗೂಡಿದೆ ಎಂದಿದ್ದಾರೆ ಪ್ರಿಯಾಂಕಾ.

ಕೊಪ್ಪಳದ ಹುಲಿಗೆಮ್ಮ ದೇವಿಯ ದೇವಸ್ಥಾನದಲ್ಲಿಯೇ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರ ಸೆಟ್ಟೇರಿದೆ. ನಿರ್ದೇಸನ ಓಂಸಾಯಿಪ್ರಕಾಶ್ ಅವರದ್ದು. ಕನ್ನಡದಲ್ಲಿ ನಿರ್ಮಾಣವಾಗುವ ಚಿತ್ರ ತೆಲುಗು, ತಮಿಳು, ಹಾಗೂ ಮಲಯಾಳಂಗೆ ಡಬ್ ಆಗಲಿದೆ.