ಸಂಗೀತ ಕಲಿಸಿಕೊಡಿ ಸಂಗೀತಾ.. ಎನ್ನುತ್ತಲೇ ತರ್ಲೆ ನನ್ಮಗದಲ್ಲಿ ಹೀರೋ ಆಗಿ ಗೆದ್ದವರು ನವರಸ ನಾಯಕ. ತಮ್ಮದೇ ಚಿತ್ರದಲ್ಲಿ ಮಾತನಾಡುವ ಗೊಂಬೆ ಎಂದು ಹುಡುಗನನ್ನು ತೋರಿಸಿ ಆಟವಾಡಿಸಿದ್ದ ಜಗ್ಗೇಶ್ ಈಗ ರಿಯಲ್ ಲೈಫಲ್ಲೂ ಅದನ್ನು ಮಾಡಿದ್ದಾರೆ. ತಮ್ಮ ಮನೆಯ ನಾಯಿಗೆ ಸಂಗೀತ ಕಲಿಸುತ್ತಿದ್ದಾರೆ.
ಎಂತಹವರ ಮುಖದಲ್ಲೂ ನಗು ಅರಳುವಂತೆ ಮಾಡುವ ಕಲೆ ಜಗ್ಗೇಶ್ ಅವರಿಗೆ ಸಿದ್ಧಿಸಿದೆ. ಈಗ ಅವರ ಮನೆಯ ನಾಯಿಗೆ ಸಂಗೀತವೂ ಸಿದ್ಧಿಸಿದೆ. ಜಗ್ಗೇಶ್ ಗುರು. ಅವರು ಸಂಗೀತ ಹಾಡುತ್ತಿದ್ದರೆ.. ಆಲಾಪ ಮಾಡುತ್ತಿದ್ದರೆ.. ಅವರ ಮನೆಯ ಬೌಬೌಬೋ..ಬೋ.. ಎಂದು ಕೂಗುತ್ತಿದೆ.
ಇಂದು ಖಂಡಿತಾ ಸುಳ್ಳಲ್ಲ. ಕಾಗೆ ಹಾರಿಸೋದು ಜಗ್ಗೇಶ್ ಅವರಿಗೆ ಮಾತ್ರ ಮೀಸಲು. ಜಗ್ಗೇಶ್ ನಿಜವಾಗಿಯೂ ತಮ್ಮ ಮನೆಯ ನಾಯಿಯಿಂದ ಸಂಗೀತ ಹಾಡಿಸಿದ್ದಾರೆ. ಆ ನಾಯಿಗೆ ಸಂಗೀತ ವಿದ್ವಾನ್ ಎಂಬ ಬಿರುದನ್ನೂ ಕೊಟ್ಟಿದ್ದಾರೆ.
ಅನುಮಾನವಿದ್ದವರು ಜಗ್ಗೇಶ್ ಅವರ ಸೋಷಿಯಲ್ ಮೀಡಿಯಾ ಪೇಜಿಗೆ ಹೋಗಿ ನೋಡಬಹುದು.