ಹುಡುಗ ಹೆಂಗತ ಕೇಳಬ್ಯಾಡಿರಿ..
ಬೆನ್ನ ಹಿಂದೈತೆ ಹೆಸರು ಭರ್ಜರಿ..
ಒಳ್ಳೆತನಕೆ ಇವನೆ ಗುರುತುರೀ..
ಒಳಗಿನ್ ವಿಷ್ಯಾ ಯಾಕೆ ಬೇಕುರೀ..
ಹುಡುಗ ಗೋಲ್ಡ್ ಅಲ್ಲ.. ಗೋಲ್ಡ್ ಫ್ಯಾಕ್ಟರಿ ಎಂದು ವರ್ಣಿಸುವ ರೆಟ್ರೋಶೈಲಿಯ ಹಾಡು.. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ್ದು.
ಹೀರೋ ಚಂದನ್ ಶೆಟ್ಟಿಯಾದರೂ.. ಹಾಡಿನಲ್ಲಿಯೂ ಅವರು ಪ್ರೇಕ್ಷಕ. ಗುರುರಾಜ್ ಹೊಸಕೋಟೆ, ಪ್ರವೀಣ್-ಪ್ರದೀಪ್ ಜೋಡಿ ಹಾಡಿರೋ ಹಾಡು. ಮ್ಯೂಸಿಕ್ಕೂ ಪ್ರವೀಣ್-ಪ್ರದೀಪ್ ಜೋಡಿಯದ್ದೇ.
ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಉಷಾ ಗೋವಿಂದ ರಾಜು ನಿರ್ಮಾಪಕರು. ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಚಂದನ್ ಶೆಟ್ಟಿಯೆದುರು ಅರ್ಚನಾ ಕೊಟ್ಟಿಗೆ ಹೀರೋಯಿನ್. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಪ್ರತಿಭಾವಂತರ ದಂಡೇ ಇರುವ ಚಿತ್ರದ ಕಥೆ ಕೂಡಾ ರೆಟ್ರೋ ಶೈಲಿಯಲ್ಲಿಯೇ ಇದೆ.