ನಿಂಗ್ ಒಳ್ಳೆ ಹುಡ್ಗೀರು ಎಷ್ಟೋ ಜನ ಸಿಗ್ತಿದ್ರು. ನಾನ್ ಈ ಥರಾ ಅಂತ ಗೊತ್ತಿದ್ರೂ ಯಾಕ್ ನನ್ ಲವ್ ಮಾಡ್ದೆ..
ಇಡೀ ಟ್ರೇಲರಿನಲ್ಲಿರೋದು ಅದೊಂದೇ ಒಂದು ಡೈಲಾಗ್. ಮಿಕ್ಕ ಸಂಭಾಷಣೆಯೆಲ್ಲ ಕೇವಲ ಕಣ್ಣಿನಲ್ಲೇ.. ರಚಿತಾ ರಾಮ್, ಡಾಲಿ ಧನಂಜಯ್, ಸುಹಾಸಿನಿ, ಅಚ್ಯುತ್.. ಎಲ್ಲರೂ ಕಣ್ಣಿನಲ್ಲೇ ಕೆಣಕಿ.. ನಗಿಸಿ.. ಅಳಿಸುವ ಸಕಲ ಸೂಚನೆಯನ್ನೂ ಕೊಟ್ಟುಬಿಡ್ತಾರೆ. ಮಾನ್ಸೂನ್ ರಾಗ ಟ್ರೇಲರ್, ಅದರೊಳಗಿನ ಕಲರ್ ಕಾಂಬಿನೇಷನ್.. ಬಿಜಿಎಂನಲ್ಲಿ ಅನೂಪ್ ಸಿಳೀನ್.. ಎಲ್ಲರೂ ಹೃದಯಕ್ಕೇ ಲಗ್ಗೆ ಹಾಕುತ್ತಾರೆ. ಸಿನಿಮಾ ರಿಲೀಸ್ ಆಗ್ತಿರೋದು ಆಗಸ್ಟ್ 19ಕ್ಕೆ.
ಇದೇ ಮೊದಲ ಬಾರಿಗೆ ಡಾಲಿ & ಡಿಂಪಲ್ ಒಟ್ಟಿಗೇ ನಟಿಸಿದ್ದಾರೆ. ಅಚ್ಯುತ್ ಜೊತೆ ಸುಹಾಸಿನಿ. ಈ ಚಿತ್ರದಲ್ಲಿ ನನ್ನದು ಲೈಂಗಿಕೆ ಕಾರ್ಯಕರ್ತೆಯ ಪಾತ್ರ. ಹಾಡುಗಳಂತೂ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನಿಸುವಂತಿವೆ. ಪ್ರತಿ ಪಾತ್ರವನ್ನು ನಿರ್ದೇಶಕರು ಅದ್ಭುತವಾಗಿ ತೋರಿಸಿದ್ದಾರೆ ಎಂದು ಡೈರೆಕ್ಟರ್ ರವೀಂದ್ರ ನಾಥ್ ಅವರಿಗೆ ನೀಡಿದ್ದಾರ ರಚಿತಾ.
ದಯವಿಟ್ಟು ಸಿನಿಮಾ ನೋಡಿ. ರಚಿತಾ ಅವರದ್ದು ಲೈಂಗಿಕ ಕಾರ್ಯಕರ್ತೆಯ ಪಾತ್ರವಾದರೂ ಒಂದೇ ಒಂದು ಮುಜುಗರದ ದೃಶ್ಯ, ಸಂಭಾಷಣೆ ಇಲ್ಲ. ಇಡೀ ಸಿನಿಮಾವನ್ನು ಕುಟುಂಬದೊಂದಿಗೆ ಕೂತು ನೋಡಬಹುದು. ರಚಿತಾ ರಾಮ್ ಕಣ್ಣುಗಳ ಮಾತುಕತೆಗೆ ಚಿತ್ರದಲ್ಲಿ ಉತ್ತರ ಇದೆ ಎಂದಿದ್ದಾರೆ ಡಾಲಿ. ವಿಖ್ಯಾತ್ ನಿರ್ಮಾಣದ ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆ ಚಿತ್ರತಂಡದವರಿಗಂತೂ ಖುಷಿ ಕೊಟ್ಟಿದೆ.