ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ.
ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.
ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.