ಅಶಿಕಾ ರಂಗನಾಥ್ ಎಂದರೆ ಚುಟು ಚುಟು ಫೇಮ್ ಸುಂದರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚುಟು ಚುಟು ಸುಂದರಿ ಬಬ್ಲಿ ಬಬ್ಲಿ ಪಾತ್ರಗಳಲ್ಲಿ ಮಿಂಚಿದ್ದೇ ಹೆಚ್ಚು. ಮದಗಜದಲ್ಲಿ ಟ್ರೆಡಿಷನಲ್ ಸುಂದರಿಯಾಗಿಯೂ ವ್ಹಾವ್ ಎನಿಸಿದ್ದ ಚೆಲುವೆಯನ್ನು ದೇವಕನ್ನಿಕೆ ಮಾಡಲು ಹೊರಟಿದ್ದಾರೆ ಸಿಂಪಲ್ ಸುನಿ.
ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ಗತವೈಭವ ಚಿತ್ರದಲ್ಲಿ ಅಶಿಕಾ ರಂಗನಾಥ್ ದೇವಕನ್ನಿಕೆಯ ಪಾತ್ರ ಮಾಡುತ್ತಿದ್ದಾರೆ. ನನ್ನ ಚಿತ್ರದ ಕಥೆ ಮತ್ತು ಪಾತ್ರಕ್ಕೆ ಅಪ್ಪಟ ಕನ್ನಡದ ಹುಡುಗಿ ಬೇಕಿತ್ತು. ಅಶಿಕಾ ಸೂಟ್ ಆಗುತ್ತಾರೆ. ಜೊತೆಗೆ ಚಿತ್ರದ ಹೀರೋ ದುಶ್ಯಂತ್. ಹೊಸಬರು. ಹೀಗಾಗಿ ಗುರುತಿಸಿಕೊಂಡಿರುವ ನಟಿಯೇ ಬೇಕಿತ್ತು. ಅಶಿಕಾ ರಂಗನಾಥ್ ಅವರಿಗೆ ದೇವಕನ್ನಿಕೆಯ ಪಾತ್ರಕ್ಕೆ ಸೂಟ್ ಆಗಬಲ್ಲ ಸೌಂದರ್ಯ ಮತ್ತು ಪ್ರತಿಭೆ ಎರಡೂ ಇದೆ ಎಂದಿದ್ದಾರೆ ಸುನಿ. ಸುನಿ ಜೊತೆ ಇದು ಅಶಿಕಾ ಅವರಿಗೆ 3ನೇ ಸಿನಿಮಾ. ಅವತಾರ ಪುರುಷ ಭಾಗ 1 ಮತ್ತು ಭಾಗ 2ರಲ್ಲಿ ಈಗಾಗಲೇ ಸುನಿ ಜೊತೆ ಕೆಲಸ ಮಾಡಿದ್ದಾರೆ. ದೇವಕನ್ನಿಕೆಯ ಲುಕ್ ಈ ದಿನ ಬಿಡುಗಡೆಯಾಗುತ್ತಿದೆ.