ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರವನ್ನು ಸೆಪ್ಟೆಂಬರ್ 30ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿತ್ತು. ಈಗ ಅಧಿಕೃತವಾಗಿಯೇ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.
ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿದೇವಮ್ಮ ನಿಧನರಾದರು. ಅದಕ್ಕೂ ಮುನ್ನ ಅವರು ಕೆಲಕಾಲ ಆಸ್ಪತ್ರೆಯಲ್ಲಿದ್ದರು. ಅವರ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಕೆಲವು ದಿನಗಳ ಶೂಟಿಂಗ್ ಆಗಲಿಲ್ಲ. ಹೀಗಾಗಿ ಚಿತ್ರದ ಶೂಟಿಂಗ್ ಸ್ವಲ್ಪ ಪೆಂಡಿಂಗ್ ಆಗಿದ್ದು ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿರೋದಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹೇಳಿದ್ದಾರೆ.
ಧ್ರುವ ಸರ್ಜಾ ಅವರ ಶೆಡ್ಯೂಲ್ ಹೊಸದಾಗಿ ಪ್ಲಾನ್ ಮಾಡಿಕೊಂಡು ಉಳಿದ 10-12 ದಿನಗಳ ಚಿತ್ರೀಕರಣ ನಡೆಸಲಿದ್ದೇವೆ. ಒಂದು ಚೇಸಿಂಗ್ ಸೀನ್, ಎರಡು ಹಾಡುಗಳ ಚಿತ್ರೀಕರಣ ಬ್ಯಾಲೆನ್ಸ್ ಇದೆ ಎಂದಿದ್ದಾರೆ ಅರ್ಜುನ್.
ಉದಯ್ ಕೆ.ಮೆಹ್ತಾ ನಿರ್ಮಾಪಕರಾಗಿರುವ ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ನಿಕಿತೀನ್ ಧೀರ್ ಮೊದಲಾದವರು ನಟಿಸಿದ್ದಾರೆ.
ಮಾರ್ಟಿನ್ ಚಿತ್ರ ಸೆ.30ಕ್ಕೆ ರಿಲೀಸ್ ಆಗುತ್ತಿಲ್ಲ ಎಂದು ಚಿತ್ರಲೋಕ ಈ ಹಿಂದೆಯೇ ವರದಿ ಮಾಡಿತ್ತು.