ನಿರ್ದೇಶಕ ಶಶಾಂಕ್ ಅವರ ಜೊತೆ ಕೆಲಸ ಮಾಡಬೇಕು ಅನ್ನೋದು ನನ್ನ ಬಹುದಿನಗಳ ಕನಸು. ನನಗೆ ಅವರು ಕಥೆ ಹೇಳೋ ಶೈಲಿ ಇಷ್ಟ. ಇವರು ಬೇರೆ ನಿರ್ದೇಶಕರ ಹಾಗಲ್ಲ. ಮೊದಲು ಕಥೆ ಸಿದ್ಧ ಮಾಡಿಕೊಂಡು ನಂತರ ಅದಕ್ಕೆ ಸೂಟ್ ಆಗುವ ಕಲಾವಿದರಿಗಾಗಿ ಹುಡುಕಾಡುತ್ತಾರೆ. ಅದಕ್ಕೇ ಇವರು ನಿಗಿಷ್ಟ..
ಇದು ನಿರ್ದೇಶಕ ಶಶಾಂಕ್ ಬಗ್ಗೆ ಶಿವಣ್ಣ ಹೇಳಿರೊ ಮಾತು. ಶಶಾಂಕ್ ಅವರ ಲವ್ 360 ಚಿತ್ರ ಇದೇ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರದ ಪ್ರಚಾರ ಹಮ್ಮಿಕೊಂಡಿರೋ ಶಶಾಂಕ್ ಇಂದು ಟ್ರೇಲರ್ ಹೊರತರುತ್ತಿದ್ದಾರೆ. ಆ ಟ್ರೇಲರ್`ನ್ನು ನೋಡಿಯೇ ಶಿವಣ್ಣ ಶಶಾಂಕ್ ಅವರನ್ನು ಹೊಗಳಿದ್ದಾರೆ.
ಎಲ್ಲರ ನಟನೆ ಚೆನ್ನಾಗಿದೆ. ಹೀರೋ ಹೊಸಬ ಎಂದು ಅನಿಸುತ್ತಿಲ್ಲ. ನಾಯಕ ನಾಯಕಿ ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಶಶಾಂಕ್ ಸ್ವಲ್ಪ ಟ್ರಿಕ್ಕಿಯಾಗಿ ಏನೋ ಹೊಸ ಕಥೆ ಹೇಳುತ್ತಿದ್ದಾರೆ. ಅಲ್ಲೇನೋ ಲವ್ ಸ್ಟೋರಿ ಇದೆ. ಒಂದು ಮಿಷನ್ ಫೈಟ್ ಎಲ್ಲವೂ ಇದೆ. ಇದು ಖಂಡಿತಾ ಬೇರೆಯದೇ ಸ್ಟೈಲ್ ಸ್ಟೋರಿ. ನಾನಂತೂ ಚಿತ್ರವನ್ನು ಥಿಯೇಟರಿನಲ್ಲೇ ನೋಡುತ್ತೇನೆ ಎಂದಿದ್ದಾರೆ ಶಿವಣ್ಣ.