` ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ
Vikrant Rona Image

ವಿಕ್ರಾಂತ್ ರೋಣ ಚಿತ್ರದ ಟೈಟಲ್ ಬದಲಿಸಬಹುದು. ಏಕೆಂದರೆ ವಿಕ್ಟರಿ ಬಾರಿಸಿರೋ ಚಿತ್ರ ವಿಕ್ಟರಿ ರೋಣ. ಅಂದಹಾಗೆ ಈ ವರ್ಷದಲ್ಲಿ 100 ಕೋಟಿ ಕ್ಲಬ್ ಸೇರಿರುವ 4ನೇ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿದೆ ವಿಕ್ರಾಂತ್ ರೋಣ. ವಿಕ್ಟರಿ ರೋಣ.

ರಣಬೀರ್ ಕಪೂರ್, ಶ್ರದ್ಧಾ ಕಪೂರ್, ಅರ್ಜುನ್ ಕಪೂರ್,  ಜಾನ್ ಅಬ್ರಹಾಂತ್ ನಟಿಸಿರೋ ಶಂಷೇರಾ, ಏಕ್ ವಿಲನ್ ನಂತಹ ಚಿತ್ರಗಳನ್ನೆಲ್ಲ ಸೈಡಿಗೆ ಹೊಡೆದು ನುಗ್ಗುತ್ತಿರೋದು ವಿಕ್ಟರಿ ರೋಣ. ಈ ವಾರದ ಅಂತ್ಯಕ್ಕೆ 150 ಕೋಟಿ ಕ್ಲಬ್ ಸೇರುವ ಸಾಧ್ಯತೆಗಳಿವೆ.

ಅಂದಹಾಗೆ  ಈ ವರ್ಷ 100 ಕೋಟಿ ಕ್ಲಬ್ ಓಪನ್ ಮಾಡಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.

ನಂತರ ಕೆಜಿಎಫ್ ಚಾಪ್ಟರ್ 2, ಸಾವಿರ ಕೋಟಿ ಕ್ಲಬ್ ಓಪನ್ ಮಾಡಿತು.

ಅದಾದ ನಂತರ 777 ಚಾರ್ಲಿ ಕೂಡಾ 150 ಕೋಟಿ ಬಿಸಿನೆಸ್ ಮಾಡಿತು.

ಈಗ ಕಿಚ್ಚ ಸುದೀಪ್ ಅವರ ವಿಕ್ಟರಿ ರೋಣ ಈ ಗುರಿ ಮುಟ್ಟಿದೆ.