ಅಚ್ಯುತ್ ಕುಮಾರ್. ಅಪ್ಪ.. ಅಣ್ಣ.. ಹೀರೋ.. ವಿಲನ್.. ಕಾಮಿಡಿ.. ಪಾತ್ರ ಎಂಥದ್ದೇ ಇರಲಿ.. ಸೆಕೆಂಡುಗಳಷ್ಟು ಕಾಲ ತೆರೆ ಮೇಲಿದ್ದರೂ ತಮ್ಮದೇ ಛಾಪು ಮೂಡಿಸುವ ನಟ. ಅವರ ಮೂತಿ ಮುದ್ದು ಮುದ್ದಂತೆ. ಮನಸ್ಸು ಮರಕೋತಿಯಂತೆ. ಹೀಗಂತ ಹೇಳ್ತಿರೋದು ಎಸ್.ರವೀಂದ್ರನಾಥ್.
ಮಾನ್ಸೂನ್ ರಾಗ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಹಾಡು ಸೃಷ್ಟಿಯಾಗಿರೋದು ಮತ್ತು ಚಿತ್ರಿತವಾಗಿರೋದು ಅಚ್ಯುತ್ ಕುಮಾರ್. ಸುತ್ತಲ ಸುಂದರಿಯರು.. ಚೆಲುವೆಯರ ಭರತನಾಟ್ಯ.. ಅವರ ಮಧ್ಯೆ ಅಚ್ಯುತ್ ಅವರ ಮುದ್ದಾದ ಮೂತಿ. ಮನಸು ಮರಕೋತಿ. ಮದುವೆಯಾಗದ.. ಮದುವೆಯಾಗಬೇಕು ಅನ್ನೋ ಆಸೆಯಿದ್ದೂ ಮದುವೆಯಾಗದ.. ಮದುವೆಯಾದವರನ್ನು ನೋಡಿ ಬೇಸರಗೊಳ್ಳುವ.. ಹತಾಶನಾಗುವ.. ಆಮೇಲೆ ನನ್ನದೇ ಬೆಸ್ಟ್ ಲೈಫು ಎಂದು ನಗುವ ಪಾತ್ರ ಅನ್ನೋದಂತೂ ಹಾಡಿನಲ್ಲೇ ಗೊತ್ತಾಗಿ ಹೋಗುತ್ತೆ.
ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಚಿತ್ರ ಮಾನ್ಸೂನ್ ರಾಗ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಈ ಹಾಡಿಗೆ ಸಾಹಿತ್ಯ ಪ್ರಮೋದ್ ಮರವಂತೆ ಅವರದ್ದು. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಗಾಯಕರಾಗಿ ಶಕ್ತಿ ತುಂಬಿರೋದು ವಾಸುಕಿ ವೈಭವ್. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಡಾಲಿ, ರಚಿತಾ ಜೊತೆ ಅಚ್ಯುತ್, ಸುಹಾಸಿನಿ, ಯಶಾ ಶಿವಕುಮಾರ್ ಕೂಡಾ ಇದ್ದಾರೆ.