ಇದು ವಿಜಯಯಾತ್ರೆ. ಸಿನಿಮಾವೊಂದರ ಗೆಲುವಿನ ಜಾತ್ರೆ. ಸಿನಿಮಾ ಚೆನ್ನಾಗಿದ್ದಾಗ.. ಅದನ್ನು ಫೇಲ್ ಎಂದು ಬಿಂಬಿಸಲು ಕೆಲವು ವ್ಯವಸ್ಥಿತ ಸಂಚುಗಳು ಶುರುವಾದಾಗ.. ಪ್ರೇಕ್ಷಕರೇ ಚಿತ್ರವನ್ನು ಗೆಲ್ಲಿಸೋದಿದ್ಯಲ್ಲ.. ನಿಜವಾದ ಗೆಲುವು ಅದು. ವಿಕ್ರಾಂತ್ ರೋಣ ಚಿತ್ರತಂಡ ಈಗ ಆ ಗೆಲುವಿರ ರುಚಿ ಸವಿಯುತ್ತಿದೆ. ಸುದೀಪ್ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆದಾಗ ಅದ್ಭುತ ಓಪನಿಂಗ್ ಅಂತೂ ಸಿಕ್ಕಿತ್ತು. ವಿಚಿತ್ರವೆಂದರೆ ಮೊದಲ ಶೋ ಮುಗಿಯುವ ಮುನ್ನವೇ ಸಿನಿಮಾ ಚೆನ್ನಾಗಿಲ್ಲವಂತೆ.. ಡಬ್ಬಾ ಅಂತೆ ಎಂಬ ಟಾಕ್ ಶುರುವಾಯ್ತು. ಆದರೆ.. ಸಿನಿಮಾದ ಕಥೆ, ಟೆಕ್ನಾಲಜಿ, ಪ್ರೆಸೆಂಟೇಷನ್, ಹಾಡು, ಮ್ಯೂಸಿಕ್, ಗ್ರಾಫಿಕ್ಸ್.. ಹೀಗೆ ಸಕಲವೂ ಸಕ್ಸಸ್ ಆಗಿದ್ದ ಚಿತ್ರದ ಬಗ್ಗೆ ಹೀಗೇಕೆ ಎಂದು ಚಿತ್ರತಂಡ ಕೇಳಿಕೊಳ್ಳೋ ಮೊದಲೇ ಅಲರ್ಟ್ ಆದವರು ಪ್ರೇಕ್ಷಕರು. ನಂತರ ಶುರುವಾಗಿದ್ದು ಹೊಸ ಕಥೆ.
ಈಗ ನೀವು ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟರೆ ಸಾಕು, ವಿಕ್ರಾಂತ್ ರೋಣ ಹ್ಯಾಷ್‍ಟ್ಯಾಗ್ ಖಂಡಿತಾ ಟ್ರೆಂಡಿಂಗ್‍ನಲ್ಲಿ ಕಾಣಸಿಗುತ್ತೆ. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿರುವ ಬಹುತೇಕರು ಸಿನಿಮಾ ನೋಡಿದ ನಂತರ ಚಿತ್ರ ತಮಗೆ ಏಕೆ ಇಷ್ಟವಾಯಿತು ಎಂದು ಬರೆಯುತ್ತಿದ್ದಾರೆ. ಚಿತ್ರದ ಪ್ರಚಾರ ಈಗ ಸುದೀಪ್ ಕೈಲಿಲ್ಲ. ಅದನ್ನು ನೇರವಾಗಿ ಎತ್ತಿಕೊಂಡವರು ಸಿನಿಮಾ ನೋಡಿ ಬಂದ ಪ್ರೇಕ್ಷಕರು. ಸಿನಿಮಾ ಹೇಗಿದೆ? ಯಾವ ಪಾರ್ಟ್ ಇಷ್ಟವಾಯ್ತು. ಯಾಕೆ ಇಷ್ಟವಾಯ್ತು. ಯಾವ ಹಾಡು, ಯಾರ ಅಭಿನಯ, ಗ್ರಾಫಿಕ್ಸ್, ಬಿಜಿಎಂ.. ಹೀಗೆ ಪ್ರತಿಯೊಂದನ್ನೂ ಖುದ್ದು ಪ್ರೇಕ್ಷಕರೇ ವಿವರಿಸಿ ಹೇಳುತ್ತಿದ್ದಾರೆ. ಅಲ್ಲಿಗೆ ಗೆದ್ದಿದ್ದು ವಿಕ್ರಾಂತ್ ರೋಣ. ಅನೂಪ್ ಭಂಡಾರಿ..ಕಿಚ್ಚ ಸುದೀಪ..ನಿರೂಪ್ ಭಂಡಾರಿ..ಜಾಕ್ ಮಂಜು.
ಆರಂಭದಲ್ಲಿ ಸ್ವಲ್ಪ ಡಲ್ ಎನಿಸಿದ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲೂ ಸಿನಿಮಾ ಸೂಪರ್ ಆಗಿ ಪಿಕಪ್ ಆಗಿದೆ. 100 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿರುವ ಚಿತ್ರ ವಿಕ್ರಾಂತ್ ರೋಣ. ಈ ವರ್ಷದಲ್ಲಿ 100 ಕೋಟಿ ಕ್ಲಬ್ ಸೇರಿದ 4ನೇ ಸಿನಿಮಾ.
ಜೇಮ್ಸ್
ಕೆಜಿಎಫ್ ಚಾಪ್ಟರ್ 2
777 ಚಾರ್ಲಿ
ನಂತರ..
ವಿಕ್ರಾಂತ್ ರೋಣ ಕೂಡಾ 100 ಕೋಟಿ ಕ್ಲಬ್ ಸೇರಿದೆ