ನಟಿ ಪ್ರಣೀತಾ ಸುಭಾಷ್ ವಿಶೇಷ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಹಿಂದುತ್ವದ ವಿಷಯಕ್ಕೆ, ಸಂಪ್ರದಾಯಗಳ ವಿಷಯಕ್ಕೆ, ಸಮಾಜಸೇವೆಗಳ ವಿಚಾರಕ್ಕೆ.. ಹೆಚ್ಚು ಮಾತನಾಡುವುದಕ್ಕಿಂತ ಕ್ರಿಯೆಗಳ ಮೂಲಕವೇ ಮಾತನಾಡುವ ಪ್ರಣೀತಾ ಈ ಬಾರಿ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಪ್ರಣೀತಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ `ಆರ್ನಾ' ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ವಿಶೇಷವಾದ ಹೆಸರು. ಏನಿದರ ಅರ್ಥ.. ಇದ್ಯಾಕೆ ಈ ಹೆಸರಿನ ನಾಮಕರಣ ಮಾಡಿದರು ಎಂದು ಹುಡುಕಿದಾಗ ಸಿಕ್ಕ ಅರ್ಥ ಇದು. ಆರ್ನಾ ಎಂದರೆ ದೊಡ್ಡ ಶಕ್ತಿ, ಬೆಟ್ಟದಂತಹ ದೊಡ್ಡ ಶಕ್ತಿ ಎಂದು ಅರ್ಥವಿದೆಯಂತೆ.
2021ರ ಮೇನಲ್ಲಿ ಮದುವೆಯಾಗಿದ್ದ ಪ್ರಣೀತಾ ಸುಭಾಷ್-ನಿತಿನ್ ರಾಜು ದಂಪತಿಗೆ ಆರ್ನಾ ಮೊದಲ ಮಗಳು. ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಂದಹಾಗೆ ಪ್ರಣೀತಾ ಎಂದರೆ ಶುದ್ಧ ನೀರು ಎಂಬ ಅರ್ಥವೂ ಇದೆ. ಆ ಶುದ್ಧ ನೀರಿಗೀಗ ದೊಡ್ಡ ಶಕ್ತಿ ಸಿಕ್ಕಂತಾಗಿದೆ.