` ಪ್ರಣೀತಾಗೆ ಬೆಟ್ಟದಂತಹ ದೊಡ್ಡ ಶಕ್ತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪ್ರಣೀತಾಗೆ ಬೆಟ್ಟದಂತಹ ದೊಡ್ಡ ಶಕ್ತಿ
Praneetha Subash Image

ನಟಿ ಪ್ರಣೀತಾ ಸುಭಾಷ್ ವಿಶೇಷ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಹಿಂದುತ್ವದ ವಿಷಯಕ್ಕೆ, ಸಂಪ್ರದಾಯಗಳ ವಿಷಯಕ್ಕೆ, ಸಮಾಜಸೇವೆಗಳ ವಿಚಾರಕ್ಕೆ.. ಹೆಚ್ಚು ಮಾತನಾಡುವುದಕ್ಕಿಂತ ಕ್ರಿಯೆಗಳ ಮೂಲಕವೇ ಮಾತನಾಡುವ ಪ್ರಣೀತಾ ಈ ಬಾರಿ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಪ್ರಣೀತಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ `ಆರ್ನಾ' ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ವಿಶೇಷವಾದ ಹೆಸರು. ಏನಿದರ ಅರ್ಥ.. ಇದ್ಯಾಕೆ ಈ ಹೆಸರಿನ ನಾಮಕರಣ ಮಾಡಿದರು ಎಂದು ಹುಡುಕಿದಾಗ ಸಿಕ್ಕ ಅರ್ಥ ಇದು. ಆರ್ನಾ ಎಂದರೆ ದೊಡ್ಡ ಶಕ್ತಿ, ಬೆಟ್ಟದಂತಹ ದೊಡ್ಡ ಶಕ್ತಿ ಎಂದು ಅರ್ಥವಿದೆಯಂತೆ.

2021ರ ಮೇನಲ್ಲಿ ಮದುವೆಯಾಗಿದ್ದ ಪ್ರಣೀತಾ ಸುಭಾಷ್-ನಿತಿನ್ ರಾಜು ದಂಪತಿಗೆ ಆರ್ನಾ ಮೊದಲ ಮಗಳು. ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಂದಹಾಗೆ ಪ್ರಣೀತಾ ಎಂದರೆ ಶುದ್ಧ ನೀರು ಎಂಬ ಅರ್ಥವೂ ಇದೆ. ಆ ಶುದ್ಧ ನೀರಿಗೀಗ ದೊಡ್ಡ ಶಕ್ತಿ ಸಿಕ್ಕಂತಾಗಿದೆ.