ಜುಲೈ 28ಕ್ಕೆ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಅಮಿತಾಭ್ ಬಚ್ಚನ್, ಮೋಹನ್`ಲಾಲ್ ಅಂತಹ ದಿಗ್ಗಜರು ಶುಭ ಹಾರೈಸಿದ್ದ ಸಿನಿಮಾ ವಿಕ್ರಾಂತ್ ರೋಣ. ಈಗ ಪ್ರೇಕ್ಷಕರು ದಿಬ್ಬಣದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾ ನೋಡುತ್ತೇನೆ ಎಂದು ಶುಭ ಹಾರೈಸಿದ್ದ ಭಾರತೀಯ ಚಿತ್ರರಂಗದ ದಿಗ್ಗಜ ರಾಜಮೌಳಿ ಸಿನಿಮಾ ನೋಡಿ ಮೆಚ್ಚಿದ್ದಾರೆ. ಜಕ್ಕಣ್ಣ ಏನು ಹೇಳಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಸುದೀಪ್ ಥ್ರಿಲ್ ಆಗಿದ್ದಾರೆ.
ವಿಕ್ರಾಂತ್ ರೋಣದಂತಾ ಸಿನಿಮಾ ಮಾಡೋಕೆ ಧೈರ್ಯ ಬೇಕು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದ್ಸಲ ಸೀಕ್ರೆಟ್ ರಿವೀಲ್ ಆದರೆ ಪ್ರೇಕ್ಷಕರು ಕುತೂಹಲ, ಉತ್ಸಾಹ ಎರಡನ್ನೂ ಕಳೆದುಕೊಳ್ತಾರೆ.ಆದರೆ ಇಲ್ಲಿ ಮಾತ್ರ ಪ್ರೇಕ್ಷಕರು ರಿಪೀಟ್ ಆಗುತ್ತಿದ್ದಾರೆ. ಇದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದಿದ್ದಾರೆ ರಾಜಮೌಳಿ.
ಕಿಚ್ಚ ಖುಷ್ ಹುವಾ.. ಅನೂಪ್ ಭಂಡಾರಿ ಡಬಲ್ ಖುಷ್ ಹುವಾ.. ರಾಜಮೌಳಿ ಶಹಬ್ಬಾಸ್`ಗಿರಿ ನಂತರ ತೆಲುಗಿನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ 40 ಪಟ್ಟು ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕ ಜಾಕ್ ಮಂಜು ಕೂಡಾ ಖುಷ್ ಹುವಾ.
ಚಿತ್ರದ ಭಾಸ್ಕರ್ ಪಾತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ರಾಜಮೌಳಿ ಇಡೀ ವಿಕ್ರಾಂತ್ ರೋಣ ಚಿತ್ರಕ್ಕೆ ಖುಷಿ ಕೊಟ್ಟಿದ್ದಾರೆ.