ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ದಿಬ್ಬಣ ಹೊರಟಿದ್ದರೆ ಬಾಕ್ಸಾಫೀಸ್ ತುಂಬಿ ತುಳುಕುತ್ತಿದೆ. ಮೊದಲ ದಿನವೇ 35 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರ ಈಗ 5ನೇ ದಿನಕ್ಕೆ ಕಾಲಿಟ್ಟಿದೆ. ಸಿನಿಮಾ ಎಲ್ಲೆಡೆ ಅದ್ಭುತ ಕಲೆಕ್ಷನ್ ಮಾಡುತ್ತಿದೆ ಅನ್ನೋ ಖುಷಿಯಲ್ಲಿರೋದು ಇಡೀ ಸಿನಿಮಾ ಟೀಂ.
ದೇಶದ ನಂ.1 ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿಯವರೇ ಹೊಗಳಿದ್ದು ವಿಕ್ರಾಂತ್ ರೋಣ ಚಿತ್ರತಂಡದ ಗೆಲುವಿನ ಕಿರೀಟಕ್ಕೆ ಗರಿ ತೊಡಿಸಿದೆ. ಇದರ ಮಧ್ಯೆ ಬಾಕ್ಸಾಫೀಸ್ ಗಳಿಕೆ ಹೆಚ್ಚುತ್ತಿರೋದು ಚಿತ್ರತಂಡಕ್ಕೆ ಸಿಕ್ಕಿರೋ ಇನ್ನೊಂದು ಗೆಲುವು. ಒಂದೆಡೆ ವ್ಯವಸ್ಥಿತ ಅಪಪ್ರಚಾರದ ನಡುವೆಯೂ ಸಿನಿಮಾವನ್ನು ಗೆಲ್ಲಿಸಿರೋದು ಚಿತ್ರವನ್ನು ನೋಡಿದ ಪ್ರೇಕ್ಷಕರು ಮತ್ತು ಫ್ಯಾನ್ಸ್. ಚಿತ್ರದ ಬಗ್ಗೆ ಮೌತ್ ಪಬ್ಲಿಸಿಟಿ ಶುರುವಾಗಿದೆ.
ಮೊದಲ ದಿನ : 35 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾ 2ನೇ ದಿನ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಗುರುವಾರ ಮತ್ತು ಶುಕ್ರವಾರ ರಜಾದಿನಗಳಲ್ಲ. ಆದರೆ ಶನಿವಾರ ಮತ್ತು ಭಾನುವಾರ ಗಳಿಕೆ ಮತ್ತಷ್ಟು ಏರಿಕೆಯಾಗಿದೆ. ಒಂದು ಲೆಕ್ಕದ ಪ್ರಕಾರ ಭಾನುವಾರದ ಕಲೆಕ್ಷನ್ ನಂತರ ಚಿತ್ರದ ಕಲೆಕ್ಷನ್ 100 ಕೋಟಿ ದಾಟಿದೆ ಎನ್ನಲಾಗುತ್ತಿದೆ.
ತೆಲುಗು ಮತ್ತು ಹಿಂದಿಯಲ್ಲಿ ಚಿತ್ರದ ಶೋಗಳ ಸಂಖ್ಯೆ ಏರಿಕೆಯಾಗಿದೆ. ರಣ್‍ಬೀರ್ ಕಪೂರ್ ನಟಿಸಿರೋ ಶಂಷೇರಾ ಚಿತ್ರದ ಗಳಿಕೆಯನ್ನೂ ಹಿಂದಿಕ್ಕಿ ಮುನ್ನುಗ್ಗಿದೆ ವಿಕ್ರಾಂತ್ ರೋಣ. ತೆಲುಗಿನಲ್ಲಿ ರವಿತೇಜಾ ನಟನೆಯ ರಾಮರಾವ್ ಚಿತ್ರಕ್ಕಿಂತ ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್ ಹೆಚ್ಚು. ಡಬ್ಬಿಂಗ್ ಚಿತ್ರಗಳಲ್ಲಿ ವಿಕ್ರಾಂತ್ ರೋಣ ಸಕ್ಸಸ್ ನಂ.3 ಎನ್ನುತ್ತಿದ್ದಾರೆ ಟಾಲಿವುಡ್ ಪಂಡಿತರು.