ಯೋಗರಾಜ್ ಭಟ್ ಮತ್ತು ಗಣೇಶ್ ಮತ್ತೊಮ್ಮೆ ಒಂದಾಗಿರುವ ಸಿನಿಮಾ ಗಾಳಿಪಟ 2. ಭಟ್ಟರ ವೃತ್ತಿಜೀವನದ 3ನೇ ಸಿನಿಮಾ ಆಗಿದ್ದ ಗಾಳಿಪಟ ಆಗಿನ ಕಾಲಕ್ಕೆ ದಾಖಲೆ ಬರೆದಿದ್ದ ಸಿನಿಮಾ. ಈಗ ಗಾಳಿಪಟ 2 ರೆಡಿಯಾಗಿದೆ. ಟ್ರೇಲರ್ ಹೊರಬಂದಿದೆ. ಗಾಳಿಪಟದಲ್ಲಿ ಯೋಗರಾಜ್ ಭಟ್, ಗಣೇಶ್, ದಿಗಂತ್, ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು ಇಲ್ಲಿ ಕೂಡಾ ಕಂಟಿನ್ಯೂ ಆಗಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್ ಇಲ್ಲಿ ಹೊಸದಾಗಿ ಸೇರಿದ್ದಾರೆ. ನಿರ್ಮಾಪಕರಾಗಿ ರಮೇಶ್ ರೆಡ್ಡಿ ಇದ್ದರೆ, ಸಂಗೀತ ನಿರ್ದೇಶಕನ ಸ್ಥಾನ ಅಲಂಕರಿಸಿರುವುದು ಅರ್ಜುನ್ ಜನ್ಯಾ.
ಈಗ ಚಿತ್ರದ ವಿತರಣೆಗೆ ಮುಂದಾಗಿರೋದು ಕೆವಿಎನ್ ಪ್ರೊಡಕ್ಷನ್ಸ್. ಆರ್.ಆರ್.ಆರ್. ನಂತರ ಕೆವಿಎನ್ ವಿತರಣೆ ಮಾಡುತ್ತಿರೋ ದೊಡ್ಡ ಚಿತ್ರ ಗಾಳಿಪಟ 2. ಒಂದೆಡೆ ಸಿನಿಮಾ ನಿರ್ಮಾಣದಲ್ಲಿ ಬ್ಯಸಿಯಾಗಿರೋ ಕೆವಿಎನ್, ಮತ್ತೊಂದೆಡೆ ಚಿತ್ರದ ವಿತರಣೆಯಲ್ಲೂ ದೊಡ್ಡ ಹೆಜ್ಜೆ ಇಡುತ್ತಿದೆ.