ದಕ್ಷಿಣದ ಚಿತ್ರಗಳು ಎದುರು ಮತ್ತೊಮ್ಮೆ ಬಾಲಿವುಡ್ ಸೈಲೆಂಟ್ ಆಗಿದೆ. ವಿಕ್ರಾಂತ್ ರೋಣ ಚಿತ್ರದ ಎದುರು ಜಾನ್ ಅಬ್ರಹಾಂ ನಟಿಸಿದ್ದ ಏಕ್ ವಿಲನ್ ರಿಲೀಸ್ ಆಗಿತ್ತು. ಹಿಂದಿ ಮಾರ್ಕೆಟ್ನಲ್ಲಿ ಅಷ್ಟೋ ಇಷ್ಟೋ ಉಸಿರಾಡುತ್ತಿದೆಯಾದರೂ ಬೇರೆ ಮಾರ್ಕೆಟ್ಗಳಲ್ಲಿ ಢುಂ ಢುಂ ಢುಮ್ಕಿ. ಅತ್ತ ತೆಲುಗಿನಲ್ಲಿ ರವಿತೇಜ ಅಭಿನಯದ ರಾಮರಾವ್ ಆನ್ ಡ್ಯೂಟಿ ಚಿತ್ರ ಕೂಡಾ ನಿರೀಕ್ಷೆಯನ್ನು ರೀಚ್ ಮಾಡೋಕೆ ಆಗಿಲ್ಲ. ಇದರ ನಡುವೆ ಭರ್ಜರಿ ಪ್ರದರ್ಶನ ಕಾಣ್ತಿರೋದು ಒನ್ & ಓನ್ಲಿ ವಿಕ್ರಾಂತ್ ರೋಣ.
ಈ ಹಿಂದೆ ಕೆಜಿಎಫ್ ಎದುರೂ ಜಾನ್ ಅಬ್ರಹಾಂ ಸಿನಿಮಾ ಸೋತಿತ್ತು. ಪುಷ್ಪ ಚಿತ್ರದ ಎದುರು ಕೆಲವು ಹಿಂದಿ ಚಿತ್ರಗಳು ಮಕಾಡೆ ಮಲಗಿದ್ದವು. ಆರ್.ಆರ್.ಆರ್. ಎದುರು ಬರುವ ಧೈರ್ಯವನ್ನು ಬಾಲಿವುಡ್`ನ ದೊಡ್ಡ ಚಿತ್ರಗಳು ಮಾಡಿರಲಿಲ್ಲ. ತಮಿಳಿನ ವಿಕ್ರಂ ಎದುರೂ ಹಿಂದಿ ಚಿತ್ರಗಳು ಮುಗ್ಗರಿಸಿ ಬಿದ್ದಿದ್ದವು.
ವಿಶೇಷವೆಂದರೆ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಲೆಕ್ಕ ಮಾತ್ರ ಸಿಗುತ್ತಿಲ್ಲ. ಒಬ್ಬೊಬ್ಬರ ಲೆಕ್ಕ ಒಂದೊಂದು ರೀತಿ. ಅತ್ಯಂತ ಕಡಿಮೆ ಲೆಕ್ಕವೆಂದರೆ 30 ಕೋಟಿ. ಹೆಚ್ಚು ಲೆಕ್ಕವೆಂದರೆ 35 ಕೋಟಿ. ಇದು ವಿಶ್ವದೆಲ್ಲೆಡೆಯ ಲೆಕ್ಕ.
ತಮಿಳುನಾಡಿನಲ್ಲಿ ಮೊದಲ ದಿನ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದ್ದು, 2ನೇ ದಿನ ಇನ್ನೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ತೆಲುಗಿನ ಎರಡೂ ರಾಜ್ಯಗಳಲ್ಲಿ ಕಲೆಕ್ಷನ್ 2 ಕೋಟಿ ದಾಟಿದ್ದು, 2ನೇ ದಿನ ಆ ಲೆಕ್ಕವನ್ನೂ ಮೀರಿಸುವ ಸೂಚನೆ ಸಿಕ್ಕಿದೆ.
ಹಿಂದಿ ಮಾರುಕಟ್ಟೆಯಲ್ಲಿ ಎರಡೂವರೆ ಕೋಟಿ ಕಲೆಕ್ಷನ್ ಆಗಿದ್ದು, ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ರೀವ್ಯೂ ಚಿತ್ರದ ಕಲೆಕ್ಷನ್ ಹೆಚ್ಚಿಸುವ ಸೂಚನೆ ಕೊಟ್ಟಿದೆ.
ಟೋಟ್ಟಲ್ಲಿ.. ವಿಕ್ರಾಂತ್ ರೋಣ ಸಕ್ಸಸ್ ಸ್ಟೋರಿ ಇಷ್ಟೆ.. ರಾರಾ ರಕ್ಕಮ್ಮ.. ಸೂಪರ್ ಹಿಟ್ ಫಿಕ್ಸಮ್ಮ..