ಯೋಗರಾಜ್ ಭಟ್ಟರು ಪ್ರೀತಿ ಮಾಡಿಸೋಕೆ ಹೊರಟರೆ ಹಾಗೇ.. ಗಣೇಶ್, ದಿಗಂತ್, ರಾಜೇಶ್ ಕೃಷ್ಣ ಅವರಿಗೆಲ್ಲ ಪ್ರೇಮ ಪಾಠ ಕಲಿಸಿದ ಲವ್ ಮೇಷ್ಟ್ರು ಭಟ್ಟರು. ಈ ಬಾರಿ ಭಟ್ಟರ ಕೈಗೆ ಸಿಕ್ಕಿರುವ ಉದಯೋನ್ಮುಖ ಪ್ರೇಮಿ ಪವನ್ ಕುಮಾರ್. ಗಾಳಿಪಟ 2 ಚಿತ್ರದ ಉದಯೋನ್ಮುಖ ಪ್ರೇಮಿಯಾಗಿ ನಟಿಸಿರುವುದು ಲೂಸಿಯಾ ಪವನ್. ಹೀರೋ ಆಗಿ ಅವರಿಗಿದು ಮೊದಲ ಸಿನಿಮಾ.
ಇಲ್ಲಿ ಅವರು ಕಾಲೇಜ್ ಸ್ಟೂಡೆಂಟ್ ಆಗಿ ಲೆಕ್ಚರರ್`ಗೇ ಲೈನ್ ಹಾಕ್ತಾರೆ. ಸ್ಟೂಡೆಂಟ್ ಲವ್ ಮಾಡೋಕೆ ಕಷ್ಟವಾಗಿ ಲೆಕ್ಚರರ್ ಶರ್ಮಿಳಾ ಮಾಂಡ್ರೆ ಮನೆಯ ಬಾಗಿಲು ಕ್ಲೋಸ್ ಮಾಡ್ತಾರೆ. ಮನಸ್ಸಿನ ಬಾಗಿಲೂ ಕ್ಲೋಸ್ ಆಗಿ ಹೋಯ್ತಾ.. ಆಗಸ್ಟ್ 12ಕ್ಕೆ ಥಿಯೇಟರಿಗೆ ಹೋದರೆ ಪೂರ್ತಾ ಕಥೆಯನ್ನ ಅಲ್ಲೇ ಹೇಳ್ತಾರೆ ಯೋಗರಾಜ್ ಭಟ್ರು.
ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ , ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್ ಜೋಡಿ ಜೋಡಿಯಾಗಿ ನಟಿಸಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಅಂದಹಾಗೆ ನಾಳೆ ಅಂದ್ರೆ ಜುಲೈ 31ಕ್ಕೆ ಗಾಳಿಪಟ 2 ಚಿತ್ರದ ಟ್ರೇಲರ್ ಹಾರಿಸಲಿದ್ದಾರೆ.