ಗರಗರಗರಗರ ಗಗ್ಗರ ಜರ್ಬ.. ಪಿರನಲ್ಕುರಿ ನೆತ್ತರ ಪರ್ಬ..
ರಾ.. ರಾ.. ರಕ್ಕಮ್ಮ.. ರಾ.. ರಾ.. ರಕ್ಕಮ್ಮ.. ಯಕ್ಕಸಕ್ಕ ಯಕ್ಕಸಕ್ಕ..
ಗುಮ್ಮ ಬಂದ ಗುಮ್ಮ..
ಹೀಗೆ ಹಲವು ಸೆನ್ಸೇಷನ್ ಹುಟ್ಟುಹಾಕಿದ್ದ ವಿಕ್ರಾಂತ್ ರೋಣ ಸುದೀಪ್ ಅವರ ಇದುವರೆಗಿನ ಎಲ್ಲ ಚಿತ್ರಗಳ ದಾಖಲೆಯನ್ನೂ ಮೀರಿ ಅದ್ಧೂರಿ ಬಿಡುಗಡೆ ಕಂಡಿತ್ತು. ಮೊದಲ ದಿನ ನಡೆದದ್ದು ಒಂಭತ್ತೂವರೆ ಸಾವಿರಕ್ಕೂ ಹೆಚ್ಚು ಶೋಗಳು. ರಾಜ್ಯದಲ್ಲಿಯೇ ಎರಡೂವರೆ ಸಾವಿರ ಶೋಗಳು. ಅದ್ಧೂರಿ.. ಅಬ್ಬರ..
ಊರ್ವಶಿ ಚಿತ್ರಮಂದಿರಕ್ಕೆ ಖುದ್ದು ಪತ್ನಿ ಪ್ರಿಯಾ ಸುದೀಪ್ ಮತ್ತು ಕಿಚ್ಚನ ರಾಜಕುಮಾರಿ ಮಗಳು ಸಾನ್ವಿ ಸುದೀಪ್ ಬಂದಿದ್ದರು. ಪ್ರಿಯಾ ಅವರೊಂದಿಗೆ ನಿರೂಪ್ ಭಂಡಾರಿ ಕೂಡಾ ಚಿತ್ರಮಂದಿರದಲ್ಲೇ ಕೂತು ಸಿನಿಮಾ ನೋಡಿದರು. ಸುದೀಪ್ ಅವರ ಆರೋಗ್ಯ ಕೈಕೊಟ್ಟಿರುವ ಕಾರಣ ಸಾನ್ವಿ ಮಧ್ಯಾಹ್ನದ ಶೋಗೆ ಬಂದರು.
ಊರ್ವಶಿ ಚಿತ್ರಮಂದಿರವೊಂದರ ಕಲೆಕ್ಷನ್ನೇ 25 ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ. ಎಲ್ಲ ಶೋಗಳೂ ಹೌಸ್‍ಫುಲ್. ಇನ್ನೊಂದು ಪ್ರಮುಖ ಚಿತ್ರಮಂದಿರ ವೀರೇಶ್‍ನಲ್ಲಿ ಎರಡು ಸ್ಕ್ರೀನ್ ಇವೆ. 2ಡಿ ಮತ್ತು 3ಡಿ ಎರಡರಲ್ಲೂ ನೋಡಬಹುದು. ಎರಡೂ ಸೇರಿ ಮೊದಲ ದಿನ ನಡೆದದ್ದು ಒಟ್ಟು 12 ಶೋಗಳು. ಎಲ್ಲ ಶೋಗಳೂ ಹೌಸ್‍ಫುಲ್. ರಾಜ್ಯದ ವಿವಿಧೆಡೆ ಕೂಡಾ ಅದ್ಭುತ ಪ್ರದರ್ಶನ ಕಂಡಿವೆ. ಎಲ್ಲೆಡೆ ಹೌಸ್‍ಫುಲ್ ಶೋಗಳು. ಇನ್ನು 2ನೇ ದಿನದ ಶೋಗಳೂ ಆಗಲೇ ಹೌಸ್‍ಫುಲ್ ಆಗುತ್ತಿವೆ. ವಿಮರ್ಶಕರಷ್ಟೇ ಅಲ್ಲ, ಚಿತ್ರ ನೋಡಿ ಬಂದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಹೊಗಳುತ್ತಿದ್ದಾರೆ. ತೆಲಂಗಾಣ, ಆಂಧ್ರದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಮೊದಲ ದಿನವೇ 55ರಿಂದ 60 ಕೋಟಿ ಕಲೆಕ್ಷನ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಕರ್ನಾಟಕದಲ್ಲಿ 15ರಿಂದ 20 ಕೋಟಿ ಕಲೆಕ್ಷನ್ ಎನ್ನಲಾಗಿದೆ.
ಇದೆಲ್ಲದರಿಂದ ಖುಷಿಯಾಗಿರೋದು ಜಾಕ್ ಮಂಜು.