ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ಕನ್ನಡದ ಜನಪ್ರಿಯ ನಟಿಯರು ಯಾರ್ ಯಾರು ಅನ್ನೋ ಸಮೀಕ್ಷೆ ಮಾಡಿತ್ತು. ಟಾಪ್ ಲಿಸ್ಟ್‍ನ್ನು ಕೂಡಾ ಬಿಡುಗಡೆ ಮಾಡಿತ್ತು.ನಿರೀಕ್ಷೆಯಂತೆಯೇ ಶ್ರೀವಳ್ಳಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಂ.1 ಸ್ಥಾನ ಪಡೆದಿದ್ದರು. ಅದು ಕನ್ನಡತಿಯಾಗಿ ನಂ.1. ಏಕೆಂದರೆ ರಶ್ಮಿಕಾ ಕೂಡಾ ಕನ್ನಡ ಚಿತ್ರದಲ್ಲಿ ನಟಿಸಿ ವರ್ಷಗಳೇ ಆಗಿವೆ.
ನಂ.2 ಸ್ಥಾನದಲ್ಲಿದ್ದವರು ರಚಿತಾ ರಾಮ್. ಸಹಜವೇ. ಅತೀ ಹೆಚ್ಚು ಚಿತ್ರಗಳು ಹಾಗೂ ಅತಿ ಹೆಚ್ಚು ಯಶಸ್ವಿ ಚಿತ್ರಗಳು ಇರುವುದು ಅವರ ಹೆಸರಲ್ಲೆ..
3ನೇ ಸ್ಥಾನದಲ್ಲಿರೋದು ರಾಧಿಕಾ ಪಂಡಿತ್. ವಿಶೇಷವೆಂದರೆ ರಾಧಿಕಾ ಪಂಡಿತ್ ಕೂಡಾ ನಟಿಸಿ.. ಅವರ ಚಿತ್ರವೊಂದು ರಿಲೀಸ್ ಆಗಿ ಕೆಲವು ವರ್ಷಗಳೇ ಆಗಿವೆ.
ಇನ್ನು 4ನೇ ಸ್ಥಾನ ಇನ್ನೂ ಇಂಟ್ರೆಸ್ಟಿಂಗ್. ನಂ.4 ಸ್ಥಾನದಲ್ಲಿರೋದು ರಮ್ಯಾ. ರಮ್ಯಾ ಕನ್ನಡ ಅಷ್ಟೇ ಅಲ್ಲ, ಅವರು ನಟಿಸಿದ್ದ ಸಿನಿಮಾ ತೆರೆ ಕಂಡೇ 8 ವರ್ಷಗಳು ಕಳೆದು ಹೋಗಿದೆ.
ನಂ.5 ಸ್ಥಾನದಲ್ಲಿರೋದು ಅಶಿಕಾ ರಂಗನಾಥ್.
ವಿಶೇಷವೆಂದರೆ ಈ ಲಿಸ್ಟ್‍ನಲ್ಲಿ ಇರೋ ಟಾಪ್ 5ನಲ್ಲಿರೋ ನಟಿಯರಲ್ಲಿ ರಶ್ಮಿಕಾ ಕನ್ನಡದಲ್ಲಿ ನಟಿಸುತ್ತಿಲ್ಲ. ರಮ್ಯಾ ಮತ್ತು ರಾಧಿಕಾ ಪಂಡಿತ್ ಇಬ್ಬರೂ ನಟಿಸಿ ವರ್ಷಗಳೇ ಕಳೆದುಹೋಗಿವೆ. ಆಕ್ಟಿವ್ ಇರೋದು ರಚಿತಾ ರಾಮ್ ಮತ್ತು ಅಶಿಕಾ ರಂಗನಾಥ್ ಮಾತ್ರ.
ನಟನೆ ನಿಲ್ಲಿಸಿದ್ದರೂ ಕ್ರೇಜ್ ಇದೆ ಅಂತನಾ..?
ಅಥವಾ..
ಹೊಸದಾಗಿ ಬಂದವರು ಕ್ರೇಜ್ ಸೃಷ್ಟಿಸಿಲ್ಲ ಅಂತಾನಾ? ಈ ಸಮೀಕ್ಷೆಯ ಮಾನದಂಡವೇನೋ.. ಯಾವನಿಗ್ಗೊತ್ತು..