ಗರಗರಗರ ಗಗ್ಗರ ಜರ್ಬ
ಪಿರನಲ್ಕುರಿ ನೆತ್ತರ ಪರ್ಬ..
ವಿಕ್ರಾಂತ್ ರೋಣ. ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನೋಡಿದವರೆಲ್ಲ ಫುಲ್ ಖುಷ್. ಅನೂಪ್ ಭಂಡಾರಿ ಸೃಷ್ಟಿಸಿರುವ 3ಡಿ ಜಗತ್ತು ನಮ್ಮ ಅಕ್ಕಪಕ್ಕವೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಪ್ರೇಕ್ಷಕರೂ ಖುಷಿ ಖುಷಿ. ಅಂದಹಾಗೆ ಚಿತ್ರದಲ್ಲಿ ವಿಕ್ರಾಂತ್ ರೋಣ ಪ್ರಮುಖ ಪಾತ್ರಧಾರಿ. ಆದರೆ.. ಅವರ ಸುತ್ತಲೂ ಇರೋ ಪಾತ್ರಗಳ ಗತ್ತು ಗೈರತ್ತುಗಳೇ ಬೇರೆ.
ನಿರೂಪ್ ಭಂಡಾರಿ ಅವರದ್ದು ಇಲ್ಲಿ ಸಂಜೀವ್ ಗಾಂಭಿರ ಅನ್ನೋ ಪಾತ್ರ. ಹೆಸರಲ್ಲಷ್ಟೇ ಗಾಂಭೀರ್ಯ. ಮಿಕ್ಕಂತೆ ಫುಲ್ ತರಲೆ.
ಪನ್ನ ಅಂದ್ರೆ ಅಪರ್ಣಾ ಬಲ್ಲಾಳ್. ಚಿನಕುರುಳಿ ಪಟಾಕಿ ಹುಡುಗಿ. ನೀತಾ ಅಶೋಕ್ ನಟಿಸಿರುವ ಪಾತ್ರ ಫುಲ್ ಅಡ್ವೆಂಚರಸ್ ಕ್ಯಾರೆಕ್ಟರ್.
ಈಕೆಯ ಜೊತೆ ಇರುವ ಪಾತ್ರವೇ ಮುನ್ನ. ಈಕೆಯ ಅವಳಿ ಸಹೋದರ. ಸಿದ್ದು ಮೂಲಿಮನಿ ನಟಿಸಿರೋ ಪಾತ್ರ.
ವಿಶ್ವನಾಥ್ ಬಲ್ಲಾಳ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸಿದ್ದಾರೆ. ಕಾಮಿಡಿ ಜಾನರ್ ಬಿಟ್ಟು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಧುಸೂಧನ್ ರಾವ್ ಜನಾರ್ಧನ್ ಗಾಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ರಕ್ಕಮ್ಮನ ಕಥೆ ಬಿಡಿ.. ಯಕ್ಕಸಕ್ಕ.. ಯಕ್ಕಸಕ್ಕ..