ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ..
ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ..
ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ..
ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್.
ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ.
ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ..
ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ..
ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ..