ಮರಿ ಟೈಗರ್ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮಂಥೆರೋ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ರಾಬರ್ಟ್ ಚಿತ್ರದಲ್ಲಿ ಇಬ್ಬರಿಗೂ ದೊಡ್ಡ ಸ್ಕ್ರೀನ್ ಪೇಸ್ ಸಿಗದೇ ಇದ್ದರೂ, ತೆರೆಯ ಮೇಲಿದ್ದಷ್ಟು ಹೊತ್ತಿನಲ್ಲಿ ರಾಘವ್-ತನು ಜೋಡಿ ಮೋಡಿ ಮಾಡಿತ್ತು. ಈಗ ಮತ್ತೊಮ್ಮೆ ಜೋಡಿಯಾಗುತ್ತಿರೋದು ಮಾದೇವನಿಗಾಗಿ.
ವಿನೋದ್ ಮಾದೇವ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೈಲು ಮತ್ತು ಜೈಲಿನ ಬ್ಯಾಕ್‍ಡ್ರಾಪ್‍ನಲ್ಲಿ ನಡೆಯೋ 80ರ ದಶಕದ ಕಥೆ ಮಾದೇವ ಚಿತ್ರದ್ದು. ಖಾಕಿ ಚಿತ್ರವನ್ನು ನಿರ್ದೇಶಿಸಿದ್ದ ನವೀನ್ ಬಿ.ರೆಡ್ಡಿ ಮಾದೇವ ಚಿತ್ರಕ್ಕೆ ಡೈರೆಕ್ಟರ್. ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಶೃತಿ ಇದ್ದಾರೆ.
ಗಾಯತ್ರಿ ರಾಜೇಶ್ ಮತ್ತು ಲವ್‍ಗುರು ಸುಮನ್ ನಿರ್ಮಾಣದ ಚಿತ್ರದ ಚಿತ್ರೀಕರಣ ಬೆಂಗಳೂರು, ಧಾರವಾಡ ಮತ್ತು ಹೈದರಾಬಾದ್‍ನಲ್ಲಿ ನಡೆಯಲಿದೆ.