ಕಲಾವಿದರಿಗೆ ಬಹಳ ಅಪರೂಪವಾಗಿ ಒಲಿಯುವ ಕಲೆ ಅದು. ನಗಿಸುತ್ತಲೇ ಅಳಿಸುವ ಕಲೆ. ನೋಡುಗರನ್ನು ನಗಿಸುತ್ತಲೇ ಭಾವುಕರನ್ನಾಗಿಸುವ ಕಲೆ. ಅದನ್ನು ಗಣೇಶ್ ಅದ್ಭುತವಾಗಿ ಮಾಡುತ್ತಾರೆ. ಗಾಳಿಪಟ 2 ಚಿತ್ರದ ಅವರ ಪಾತ್ರ ಪರಿಚಯ ನೋಡಿದವರಿಗೆ ಮತ್ತೊಮ್ಮೆ ಗಣೇಶ್ ದರ್ಶನವಾಗಿದೆ.
ನಗುವಿನೊಂದಿಗೇ ಶುರುವಾಗುತ್ತೆ ಗಣಿಯ ಪರಿಚಯ. ಕನ್ನಡಿಗ.. ಆದರೆ ಕನ್ನಡ ಬರಲ್ಲ. ಕಾಪಿ ಹೊಡೆಯೋಕೆ ಕ್ವಶ್ಚನ್ ಯಾವ್ದು.. ಆನ್ಸರ್ ಯಾವ್ದು ಎನ್ನುವುದೂ ಗೊತ್ತಿಲ್ಲದ ಪ್ರತಿಭಾವಂತ. ಮಧ್ಯದಲ್ಲೊಂದು ಯುವ ಜನಾಂಗ ರೋಮಾಂಚಿತರಾಗುವ ವಿಚಿತ್ರ ಲವ್ ಸ್ಟೋರಿ.. ನಗು ನಗಿಸುತ್ತಲೇ ಸಾಗುವ ಟೀಸರ್.. ಸನ್ನಿವಶೇವೇನೆಂದು ಗೊತ್ತಾಗದೇ ಹೋದರೂ ಗಣಿ ಅವರ ಆ ದೃಶ್ಯ ನೋಡಿದರೆ ಭಾವುಕರಾಗುವುದು ಗ್ಯಾರಂಟಿ.
ಗಾಳಿಪಟ 2 ಚಿತ್ರದ ಗಣಿ ಪಾತ್ರದ ಪರಿಚಯ ಇದು. ರಿಯಲ್ ಸ್ಟಾರ್ ಉಪೇಂದ್ರ ಗಣಿ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡಿದ್ದಾರೆ. ಜುಲೈ 31ಕ್ಕೆ ಟ್ರೇಲರ್ ರಿಲೀಸ್ ಮಾಡಿ ಆಗಸ್ಟ್ 12ಕ್ಕೆಲ್ಲ ಸಿನಿಮಾ ತೆರೆ ಮೇಲೆ ತರೋದು ಗಾಳಿಪಟ 2 ಚಿತ್ರದ ಪ್ಲಾನ್.
ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.