ಯೋಗರಾಜ್ ಭಟ್ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳಿಗೆ ನಾಂದಿ ಹಾಡಿದವರು. ಭಟ್ಟರು ಮತ್ತು ಗಣೇಶ್ ಇಬ್ಬರದ್ದೂ ಸೂಪರ್ ಹಿಟ್ ಕಾಂಬಿನೇಷನ್. ಈ ಜೋಡಿ 4ನೇ ಬಾರಿಗೆ ಒಂದಾಗಿರುವ ಚಿತ್ರವೇ ಗಾಳಿಪಟ 2. ಈ ಚಿತ್ರದ ಹಾಡುಗಳು ಈಗಾಗಲೇ ಗುಂಗು ಹಿಡಿಸುತ್ತಿವೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಪ್ರಚಾರವನ್ನೂ ಜೋರಾಗಿಯೇ ಇಟ್ಟುಕೊಂಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.
ಇವತ್ತು ಅಂದ್ರೆ ಜುಲೈ 26ನೇ ತಾರೀಕು ಸಂಜೆ 5 ಗಂಟೆ 2 ನಿಮಿಷಕ್ಕೆ ಗಾಳಿಪಟ 2 ಚಿತ್ರದ ಮೊದಲ ಟೀಸರ್ ಹೊರಬೀಳಲಿದೆ. ಅದರಲ್ಲಿ ಗಣೇಶ್ ಪಾತ್ರದ ಕಥೆ ಇರಲಿದೆಯಂತೆ. ಅದನ್ನ ರಿಲೀಸ್ ಮಾಡೋದು ಉಪ್ಪಿ.
ನಾನಾಡದ ಮಾತೆಲ್ಲವ ಕದ್ದಾಲಿಸು..
ದೇವ್ಲೇ ದೇವ್ಲೇ..
ನೀನು ಬಗೆಹರಿಯದ ಹಾಡು..
ಹಾಗೂ ಎಕ್ಸಾಂ ಸಾಂಗ್‍ಗಳು ಹಿಟ್ ಆಗಿವೆ. ಈಗ ಮೊದಲ ಟೀಸರ್ ಬರಲಿದೆ. ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಸಂಯುಕ್ತಾ ಮೆನನ್, ಪವನ್, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್, ಬುಲೆಟ್ ಪ್ರಕಾಶ್ ಸೇರಿದಂತೆ ಬೃಹತ್ ತಾರಾಗಣದ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು.