ಬರೆದವರು ಜಯಂತ ಕಾಯ್ಕಿಣಿ.
ಹಾಡಿದವರು ನಿಹಾರ್ ತೌರೋ.
ಸಂಗೀತ ಅರ್ಜುನ್ ಜನ್ಯಾ.
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಹಾಡು ಮೆಲೋಡಿ ಹಾಡುಗಳ ಲೋಕಕ್ಕೆ ಹೊಸ ಸಮರ್ಪಣೆ.
ಗಾಳಿಪಟ 2 ಚಿತ್ರದ ಹೊಸ ಹಾಡು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುವಂತಿದೆ. ಕಾಯ್ಕಿಣಿ ಮತ್ತೊಮ್ಮೆ ಪದಪದಗಳನ್ನೂ ಹೃದಯದಿಂದ ಹೆಕ್ಕಿ ತೆಗೆದು ಬರೆದಿರುವ ಹಾಡಿದು. ಪವನ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಮೇಲೆ ಚಿತ್ರೀಕರಣಗೊಂಡಿರುವ ಹಾಡು ಲೆಕ್ಚರರ್ ಜೊತೆ ಪ್ರೀತಿಗೆ ಬೀಳುವ ಬಡಪಾಯಿ ವಿದ್ಯಾರ್ಥಿಯ ಪ್ರೇಮಗೀತೆಯಂತಿದೆ.
ಭಾವನೆಗಳಿಗೆ ಬಣ್ಣ ಹಚ್ಚಿದಂತಿರುವ ಹಾಡಿಗೆ ಧ್ವನಿ ನೀಡಿರುವ ನಿಹಾಲ್ ತೌರೋ ಹೊಸ ಸೆನ್ಸೇಷನ್ ಆದರೆ ಅಚ್ಚರಿಯಿಲ್ಲ. ಕಿಡಿಗೇಡಿ ಹೃದಯಕ್ಕೆ ನಶೆ ಏರಿಸುವ ಸಾಹಿತ್ಯವನ್ನು ಮೈಕೊರೆಯುವ ಚಳಿಯಲ್ಲಿ ಮತ್ತೆ ಮತ್ತೆ ಕೇಳುವಂತೆ ಹಾಡಿರುವುದು ನಿಹಾಲ್ ತೌರೋ. ಗಣೇಶ್, ವೈಭವಿ ಶಾಂಡಿಲ್ಯ, ಪವನ್, ಶರ್ಮಿಳಾ ಮಾಂಡ್ರೆ, ದಿಗಂತ್, ಅನಂತನಾಗ್, ಬುಲೆಟ್ ಪ್ರಕಾಶ್.. ಹೀಗೆ ದೊಡ್ಡ ತಾರಾಗಣದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಸದಭಿರುಚಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಶ್ರೀಮತಿ ಉಮಾ ರಮೇಶ್ ರೆಡ್ಡಿ.